ನಾಪತ್ತೆಯಾದ ಯುವಕ ಅಸ್ವಸ್ಥಗೊಂಡು ಗದ್ದೆಯಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆ | ಯುವಕನ ರಕ್ಷಣೆ

Share the Article

ಉಡುಪಿ : ನಿಟ್ಟೂರು ಬಾಳಿಗ ಫಿಶ್ ನೆಟ್ ಬಳಿ ಅಸ್ವಸ್ಥಗೊಂಡು ಗದ್ದೆಯಲ್ಲಿ ಬಿದ್ದು ಇಡೀ ರಾತ್ರಿ ಕಳೆದ ಯುವಕ ನೋರ್ವನನ್ನು ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ ಘಟನೆ ನಡೆದಿದೆ.

ಯುವಕನನ್ನು ಕಲ್ಯಾಣಪುರದ ಸುಧೀರ್(33) ಎಂದು ಗುರುತಿಸಲಾಗಿದೆ.

ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಇವರನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸುಧೀರ್ ರಾತ್ರಿ ಸಮಯದಲ್ಲಿ ನಡೆದುಕೊಂಡು ಹೋಗುವಾಗ ಅಸ್ವಸ್ಥಗೊಂಡು, ಕೆಸರು ಗದ್ದೆಯಲ್ಲಿ ಬಿದ್ದಿದ್ದು, ಬೆಳಗ್ಗೆ ಗಮನಿಸಿದ ಸ್ಥಳೀಯರು ಈ ಬಗ್ಗೆ ಸಮಾಜಸೇವಕರಿಗೆ ಮಾಹಿತಿ ನೀಡಿದರು.

ಕಲ್ಯಾಣಪುರದ ಯುವಕನೊರ್ವ ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆಗೆ ದೂರು ಬಂದಿದ್ದು, ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಆಸ್ಪತ್ರೆಗೆ ದಾಖಲಿಸ್ಪಟ್ಟಿರುವ ವ್ಯಕ್ತಿಯೇ ಕಾಣೆಯಾಗಿರುವ ಯುವಕ ಎಂಬುದು ತಿಳಿದು ಬಂತು.

Leave A Reply