ಮಾತು ಮುಂದುವರಿಸಲು ಆಗದೆ ‘ರೂಮ್’ ನಲ್ಲಿ ಚಡಪಡಿಸಿದ ಜನರು | ಅಷ್ಟಕ್ಕೂ ಅಲ್ಲಿ ಆದದ್ದಾದರೂ ಏನು ಗೊತ್ತಾ ??
ಇದೀಗ ಸಾಮಾಜಿಕ ಜಾಲತಾಣವಿಲ್ಲದೆ ಒಂದು ದಿನ ಕೂಡ ಸಾಗುವುದು ಕಷ್ಟವಾಗಿದೆ. ಹೀಗಿರುವಾಗ ಅವುಗಳು ಒಮ್ಮೆಲೆ ಸ್ಥಗಿತವಾದರೆ ಹೇಗಾಗಬೇಕು.
ಸಾಮಾಜಿಕ ಜಾಲತಾಣ ಹಾಗೂ ಮೆಸೇಜಿಂಗ್ ಆ್ಯಪ್‌ನ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಇರುವ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್ಆ್ಯಪ್ ಕೆಲವು ದಿನಗಳ ಹಿಂದೆ ಸ್ಥಗಿತಗೊಂಡು ಜನರು ಪರದಾಡುವಂಥ ಸನ್ನಿವೇಶ ಉಂಟಾಗಿತ್ತು. ಹಾಗೆಯೇ ಈಗ ಮತ್ತೊಂದು ಆ್ಯಪ್ ಅದೇ ರೀತಿಯ ಪರಿಸ್ಥಿತಿಗೆ ನೂಕಿದೆ.
ನಿನ್ನೆ ಒಂದಷ್ಟು ಮಂದಿ ಮಾತನಾಡಲು ಆಗದೆ ‘ರೂಮ್’ನಲ್ಲಿ ಚಡಪಡಿಸಿದ ವಿದ್ಯಮಾನವೂ ನಡೆದಿದೆ. ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣ ಕ್ಲಬ್‌ಹೌಸ್ ಕೈಕೊಟ್ಟಿದ್ದು. ಸಂವಾದಕ್ಕೆಂದೇ ಇರುವ ಈ ಆ್ಯಪ್ ಇದೇ ಚಾನೆಲ್ ಮೊದಲ ಸಲ ದೊಡ್ಡದಾಗಿಯೇ ತಾಂತ್ರಿಕ ಅಡಚಣೆಯನ್ನು ಎದುರಿಸಿದೆ.
ಸುಮಾರು ಮೂರು ಗಂಟೆ ಕಾಲ ಅಡಚಣೆ ಉಂಟಾಗಿದೆ. ಪೂರ್ ಕನೆಕ್ಷನ್ ಅಂತ ತೋರಿಸುತ್ತಿದ್ದು, ಬಹಳಷ್ಟು ಮಂದಿ ತಮ್ಮ ಫೋನ್-ಇಂಟರ್‌ನೆಟ್‌ನಲ್ಲೇ ಏನೋ ಸಮಸ್ಯೆ ಇರಬೇಕು ಅಂತ ಸ್ವಿಚ್ ಆಫ್-ಆನ್ ಅಥವಾ ರಿಸ್ಟಾರ್ಟ್ ಮಾಡಿ ಪರೀಕ್ಷಿಸಿಕೊಂಡಿದ್ದೂ ಆಗಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.
ರಾತ್ರಿಯ ವೇಳೆಗೆ ಬಹುತೇಕ ಸರಿಯಾಗಿದ್ದು, ಆ ನಂತರ ಈ ಕುರಿತ ಚರ್ಚೆಗೆಂದೇ ಪ್ರತ್ಯೇಕ ರೂಮ್ ಕ್ರಿಯೇಟ್ ಮಾಡಿ ತಮಗಾದ ಸಮಸ್ಯೆಗಳನ್ನು ಹೇಳಿಕೊಂಡಿದ್ದಲ್ಲದೆ, ಕ್ಲಬ್ ಇಲ್ಲ ಅಂತ ಕೆಲವರು ಪರದಾಡಿದ ಪ್ರಸಂಗಗಳ ಬಗ್ಗೆಯೂ ಮಾತನಾಡಿಕೊಂಡಿದ್ದಾರೆ. ಇನ್ನು ಸಮಸ್ಯೆ ಬಹುತೇಕ ನಿವಾರಣೆಗೊಂಡ ಬಳಿಕ ಕ್ಲಬ್‌ಹೌಸ್ ಅಧಿಕೃತ ಟ್ವಿಟರ್ ಖಾತೆಯಿಂದ ನಾವು ಮತ್ತೆ ವಾಪಸ್ ಬಂದಿದ್ದೇವೆ ಎಂದಷ್ಟೇ ಹೇಳಿಕೊಳ್ಳಲಾಗಿದ್ದು, ಆಗಿದ್ದೇನು ಎಂಬುದರ ಬಗ್ಗೆ ಅದು ಸದ್ಯ ಏನನ್ನೂ ಹೇಳಿಕೊಂಡಿಲ್ಲ.