ರಾಮಕುಂಜ : ಗ್ರಾ.ಪಂ.ಮಾಜಿ ಸದಸ್ಯ,ಬಿಜೆಪಿ ಮುಖಂಡ ದಯಾನಂದ ಕುಲಾಲ್ ನಿಧನ

Share the Article

ಕಡಬ : ರಾಮಕುಂಜ ಗ್ರಾಮದ ಹೊಸಮಣ್ಣು
ದಿ.ಚಂದಪ್ಪ ಕುಲಾಲ್‌ರವರ ಪುತ್ರ, ರಾಮಕುಂಜಗ್ರಾ.ಪಂ.ಮಾಜಿ ಸದಸ್ಯ ದಯಾನಂದ ಕುಲಾಲ್(36ವ.)ರವರು ಅ.27ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ದಯಾನಂದ ಕುಲಾಲ್‌ರವರಿಗೆ ಎರಡು ವರ್ಷದ ಹಿಂದೆ ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಯಲ್ಲಿಯೇ ಇದ್ದರು. 1 ತಿಂಗಳ ಹಿಂದೆ ಅವರಿಗೆ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಮಂಗಳೂರಿನ ಅಥೆನಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡ ಬಳಿಕ ಬಂಟ್ವಾಳದಲ್ಲಿರುವ ಪತ್ನಿ ಮನೆಯಲ್ಲಿದ್ದರು. ಅಲ್ಲಿ ಅ.27ರಂದು ಸಂಜೆ ವೇಳೆಗೆ ಮತ್ತೆ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿ ನಿಧನರಾದರೆಂದು ತಿಳಿದುಬಂದಿದೆ.
ದಯಾನಂದ ಕುಲಾಲ್‌ರವರು ಬಿಜೆಪಿ ಸಕ್ರೀಯ ಕಾರ್ಯಕರ್ತರಾಗಿದ್ದ ಇವರು ಬಿಜೆಪಿ ಸುಳ್ಯ ಮಂಡಲ ಹಿಂದುಳಿದ ವರ್ಗಗಳ ಸಮಿತಿ ಪದಾಧಿಕಾರಿ,1 ಅವಧಿಯಲ್ಲಿ ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಮಕುಂಜ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಇವರು ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಮೃತರು ತಾಯಿ ಜಾನಕಿ, ಪತ್ನಿ ಶ್ರೀರಕ್ಷಾ, ಪುತ್ರಿ ದೃಶಾನಿ, ಸಹೋದರ ಹರೀಶ್, ಸಹೋದರಿ ಗೀತಾರವರನ್ನು ಅಗಲಿದ್ದಾರೆ.

Leave A Reply