ಪುತ್ತೂರು ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ!!! ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಆರೋಪಿತ ವ್ಯಕ್ತಿ ಕುದ್ಕಾಡಿ ನಾರಾಯಣ ರೈ ನ್ಯಾಯಾಲಯಕ್ಕೆ ಹಾಜರು

ಪುತ್ತೂರು ತಾಲೂಕಿನ ಬಡಗನ್ನೂರಿನ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪಿ ಎಂದು ಬಾಲಕಿ ಹೆಸರಿಸಿರುವ ಕುದ್ಕಡಿ ನಾರಾಯಣ ರೈ ಬಂಧನ ಭೀತಿಯಿಂದ ಇಂದು ವಕೀಲರ ಮೂಲಕ ಪುತ್ತೂರಿನ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.

 

17ರ ಹರೆಯದ ಅಪ್ರಾಪ್ತ ದಲಿತ ಸಮುದಾಯದ ಬಾಲಕಿಯು ಸೆ.5 ರಂದು ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಸಂತ್ರಸ್ತೆಯ ಸಹೋದರನನ್ನೆ ಈ ಪ್ರಕರಣದಲ್ಲಿ ಸಿಲುಕಿಸಿ ಬಂಧನ ಕೂಡಾ ಆಗಿತ್ತು.

ಸೆ. 23ರಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ಹಾಜರಾಗಿ 164ರಡಿ ಹೇಳಿಕೆ ನೀಡಿದ್ದು ಅದರಲ್ಲಿ ಕುದ್ಕಾಡಿ ನಾರಾಯಣ ರೈಯವರೇ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದರು. ಆ ಬಳಿಕ ಬಂಧನ ಭೀತಿ ಎದುರಿಸುತ್ತಿದ್ದ ನಾರಾಯಣ ರೈ ತಲೆಮರೆಸಿಕೊಂಡಿದ್ದು ತನ್ನ ವಕೀಲ ಮಹೇಶ್ ಕಜೆಯವರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.ಕೆಲ ದಿನಗಳ ಹಿಂದೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು.

ಬಳಿಕ ಪೊಲೀಸರ ಕೋರಿಕೆ ಮೇರೆಗೆ ಆರೋಪಿ ನಾರಾಯಣ ರೈಯನ್ನು 2 ದಿನ ಪೊಲೀಸರ ಕಸ್ಟಡಿಗೆ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತು.

ಬಳಿಕದ ಬೆಳವಣಿಗೆಯಲ್ಲಿ ನಾರಾಯಣ ರೈಯವರು ಇಂದು ನ್ಯಾಯಾಲಯಕ್ಕೆ ಹಾಜರಾದರು. ಏತನ್ಮಧ್ಯೆ ನಾರಾಯಣ ರೈ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳು ಹಾಗೂ ಕಾಂಗ್ರೇಸ್ ಆಗ್ರಹಿಸಿತ್ತು ದಲಿತ ಸಮನ್ವಯ ಸಮಿತಿಯೂ ಅ 21 ರಂದು ಸಂಪ್ಯ ಠಾಣೆ ಚಲೋ ಬೃಹತ್ ಪ್ರತಿಭಟನೆ ಕೂಡ ಮಾಡಿತ್ತು.

ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ಅ.26ರಂದು ಸಂತ್ರಸ್ತೆಯ ಮನೆಗೆ ಬೇಟಿ ನೀಡಿದರು.

Leave A Reply

Your email address will not be published.