ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ತಲುಪಿಸಬೇಕು-ಸಚಿವ ಎಸ್ ಅಂಗಾರ

ಕಡಬ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಯಕ್ತಿಕ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಜನರಿಗೆ ಮಾಹಿತಿಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಸಂಬಂದ ಪಟ್ಟ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯೋಜನೆಗಳನ್ನು ಜನರಿಗೆ ಬಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಹೇಳಿದರು.

Ad Widget

ಅವರು ಪೆರಾಬೆ ಗ್ರಾಮ ಪಂಚಾಯಿತಿಯಲ್ಲಿ ಬುದವಾರ ನಡೆದ ಅಕ್ರಮ ಸಕ್ರಮ ಸಭೆ ಮತ್ತು ಕಂದಾಯ ಇಲಾಖೆಯ ವಿವಿಧ ಸವಲತ್ತುಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Ad Widget . . Ad Widget . Ad Widget . Ad Widget

Ad Widget

ಯೋಜನೆಗಳ ಕಾರ‍್ಯರೂಪಕ್ಕೆ ತರಲು ಅಧಿಕಾರಿಗಳ ಕೊರತೆಯಿದೆ. ಹಾಗಾಗಿ ಗ್ರಾಮ ಮಟ್ಟದ ಅಧಿಕಾರಿಗಳು ಜನರಿಗೆ ಯೋಜನೆಗಳ ಮಾಹಿತಿ ನೀಡಿ ಅರ್ಹರನ್ನು ಫಲಾನುಭವಿಗಳನ್ನಾಗಿಸಬೇಕು. ಜಿಲ್ಲಾಧಿಕಾರಿಗಳ ಗ್ರಾಮ ವ್ಯಾಸ್ತವ್ಯ ಯೋಜನೆಯನ್ನು ಎಲ್ಲಾ ಗ್ರಾಮಗಳಿಗೂ ವಿಸ್ತರಿಸುವ ಯೋಜನೆ ಸರ್ಕಾರ ಮುಂದಿದೆ. ಕರಾವಳಿಯಲ್ಲಿ ಅಡಿಕೆ ಕೃಷಿ ಹಳದಿ ರೋಗಕ್ಕೆ ತುತ್ತಾಗುತ್ತಿದೆ. ರೈತ ಅದಾಯದ ಕೊರತೆ ನೀಗಿಸಲು ರ‍್ಯಾಯವಾಗಿ ತಮ್ಮ ಜಮೀನಿನಲ್ಲಿರುವ ಕೆರೆಗಳನ್ನು ಅಭಿವೃದ್ದಿಪಡಿಸಿಕೊಂಡು ಸಿಹಿ ನೀರಿನಲ್ಲಿ ಬೆಳೆಯುವ ಮುತ್ತುಗಳನ್ನು ಉತ್ಪತ್ತಿ ಮಾಡುವ ಚಿಪ್ಪು ಮೀನು ಕೃಷಿ, ಔಷಧಯುಕ್ತವಾದ ಪಾಚಿ ಕೃಷಿ ಮಾಡಲು ಮುಂದಾಗಬೇಕು. ಅಲ್ಲದೆ ಸಿಹಿ ನೀರಿನಲ್ಲಿ ಬೆಳೆಯುವ ಅತೀ ಬೇಡಿಕೆಯ ಮೀನುಗಳ ಸಾಕಾಣೆಗೂ ಇಲಾಖೆಯಿಂದ ಪ್ರೇರೆಪಿಸಲಾಗುವುದು. ಇದಕ್ಕೆಲ್ಲ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆಗಳನ್ನು ಹಾಕಿಕೊಳ್ಳುವಂತೆ ಸಂಬAದಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.

Ad Widget
Ad Widget Ad Widget

ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ರೈ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಕೇಶ್ ರೈ ಕೆಡೆಂಜಿ, ಗುಣವತಿ, ಬಾಳಪ್ಪ ಕಳಂಜ ಉಪಸ್ಥಿತರಿದ್ದರು. ಕಡಬ ತಾಲೂಕಿನ ವಿವಿಧ ಗ್ರಾಮಗಳ 18 ಫಲಾನುಭವಿಗಳಿಗೆ ಅಕ್ರಮ ಸಕ್ರಮ ಹಕ್ಕು ಪತ್ರ, ೩೬ ಫಲಾನುಭವಿಗಳಿಗೆ ಪಿಂಚಣಿ ಯೋಜನೆಯ ಹಕ್ಕು ಪತ್ರ ಸಚಿವ ಎಸ್ ಅಂಗಾರ ವಿತರಿಸಿದರು.
ಕಡಬ ತಹಸೀಲ್ದಾರ ಅನಂತ ಶಂಕರ ಸ್ವಾಗತಿಸಿದರು. ಉಪತಹಸೀಲ್ದಾರ ಮನೋಹರ್ ಕೆ ಟಿ ವಂದಿಸಿದರು. ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ನಿರೂಪಿಸಿದರು.

Leave a Reply

error: Content is protected !!
Scroll to Top
%d bloggers like this: