ಪುತ್ತೂರು : ಕೊಳದಲ್ಲಿ ಮುಳುಗಿ ಬಾಲಕ ಗಂಭೀರ

Share the Article

ಪುತ್ತೂರು : ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಮಾಡನ್ನೂರಿನಲ್ಲಿ ಮದರಸ ವಿದ್ಯಾರ್ಥಿಯೊಬ್ಬ ಕೆಸರು ತುಂಬಿದ ನೀರಿಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ.

ವಿದ್ಯಾರ್ಥಿಗಳು ಕೊಳದ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಕೆಸರು ತುಂಬಿದ ನೀರಿಗೆ ಬಿದ್ದಿದ್ದು, ನೀರಿಗೆ ಬಿದ್ದ ಬಾಲಕ ಸುಮಾರು ಹೊತ್ತಿನವರೆಗೆ ಹೊರಬರಲಾರದೆ ಕೆಸರು ನೀರಿನಲ್ಲಿ ಬಾಕಿಯಾಗಿದ್ದ ಎಂಬ ಮಾಹಿತಿ ತಿಳಿದುಬಂದಿದೆ.

ಗಂಭೀರ ಗಾಯಗೊಂಡ ವಿಧ್ಯಾರ್ಥಿಯನ್ನು ಪುತ್ತೂರಿಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.

Leave A Reply