ಪ್ರೀತ್ಸೇ ಪ್ರೀತ್ಸೇ ಎಂದು ಹಲವು ಸಮಯಗಳಿಂದ ನಟಿಯನ್ನು ಕಾಡಿದ್ದ ಕಿರಾತಕ!!!ಪ್ರೀತಿ ನಿರಾಕರಿಸಿದಾಗ ಅಡ್ಡಗಟ್ಟಿ ಹಲ್ಲೆ ನಡೆಸಿದ

ಪ್ರೀತ್ಸೇ ಪ್ರೀತ್ಸೇ ಎಂದು ಉದಯೋನ್ಮುಖ ನಟಿಯ ಹಿಂದೆ ಬಿದ್ದ ಟೆಕ್ಕಿಯೊಬ್ಬನನ್ನು ಅನ್ನಪೂರ್ಣೇಶ್ವರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಪಾಗಲ್ ಪ್ರೇಮಿ ಟೆಕ್ಕಿ ಚಂದನ್ ಎಂದು ಗುರುತಿಸಲಾಗಿದೆ.

 

ಚಂದನ್ ಹಲವಾರು ವರ್ಷಗಳಿಂದ ಉದಯೋನ್ಮುಖ ನಟಿಯಾದ ಅನುಷಾ ರೈ ಹಿಂದೆ ಬಿದ್ದಿದ್ದು ಪ್ರೀತಿಸಲು ಪೀಡಿಸುತ್ತಿದ್ದ ಎನ್ನಲಾಗಿದೆ. ಚಂದನ್ ಕಾಲೇಜು ದಿನಗಳಿಂದನೇ ಅನುಷಾ ನನ್ನು ಕಾಡುತ್ತಿದ್ದೂ, ಇವರಿಬ್ಬರು ಮೂರು ತಿಂಗಳುಗಳ ಕಾಲ ಜೊತೆಗೆ ಸುತ್ತಾಡಿದ್ದರು. ಕೊನೆಗೆ ಬ್ರೇಕ್ ಅಪ್ ಕೂಡಾ ಆಗಿತ್ತು.

ಇದರಿಂದ ಕೋಪಗೊಂಡ ಚಂದನ್ ಅನುಷಾ ಗೆ ಬೆದರಿಕೆಯನ್ನು ಹಾಕಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ತನ್ನ ಸ್ನೇಹಿತೆಯೊಬ್ಬಳ ಮನೆಗೆ ಕ್ಯಾಬ್ ನಲ್ಲಿ ತೆರಳುತ್ತಿರುವಾಗ ಚಂದನ್ ಅನುಷಾಳನ್ನು ಅಡ್ಡ ಹಾಕಿ ಹಲ್ಲೆ ನಡೆಸಿದ್ದು, ಗಾಯಗೊಂಡ ಅನುಷಾ ಆಸ್ಪತ್ರೆಗೆ ದಾಖಲಾಗಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಚಂದನ್ ನ ಹೆಡೆಮುರಿಕಟ್ಟಿದ್ದಾರೆ.

Leave A Reply

Your email address will not be published.