ವಿಟ್ಲ: ಹಾಡುಹಗಲೇ ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿದ ಕಳ್ಳ

ವಿಟ್ಲ:ಇತ್ತೀಚಿಗೆ ಚಿನ್ನ ಕಳ್ಳರ ಪ್ರಕರಣದ ಸಂಖ್ಯೆ ಹೆಚ್ಚುತ್ತಲೇ ಇದ್ದು, ಹಾಡು ಹಗಲೇ ಇಂತಹ ಘಟನೆಗಳು ನಡೆಯುತ್ತಲಿದೆ.ಇದೇ ರೀತಿ ಇಂದು ಮಹಿಳೆ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿ ಪರಾರಿಯಾದ ಘಟನೆ ವಿಟ್ಲದಲ್ಲಿ ನಡೆದಿದೆ.

 

ಉಕ್ಕುಡ ಸಮೀಪದ ಗುಂಪಲಡ್ಕ ನಿವಾಸಿ ಕಮಲ(55) ಎಂಬವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಕೆಂಪು ಬಣ್ಣದ ಹೋಂಡಾ ಆಕ್ಟಿವಾ ವಾಹನದಲ್ಲಿ ಬಂದ ಅಪರಿಚಿತನೋರ್ವ ಮಹಿಳೆಯ ಕತ್ತಿನಲ್ಲಿದ್ದ 3.5 ಪವನ್ ತೂಕದ ಕರಿಮಣಿಸರ ಎಗರಿಸಿ ಪರಾರಿ ಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.