ಕೆಸರು ಮಿಶ್ರಿತ ನೀರಿಗೆ ಸುಳ್ಯ ನಗರ ಪಂಚಾಯತ್ ನೇರ ಹೊಣೆ:-SDPI
▪️ಸುಸಜ್ಜಿತ ನೀರು ಶುದ್ಧ ನೀರಿನ ಘಟಕ ಸ್ಥಾಪಿಸಲು ಆಗ್ರಹ
ಸುಳ್ಯ,ಅ 26:- ನಗರದಲ್ಲಿ ಸರಬರಾಜು ಆಗುತ್ತಿರುವ ಕುಡಿಯುವ ನೀರು ಕೆಸರು ಮಿಶ್ರಿತ ಗೊಂಡು ನೀರಿನಲ್ಲಿ ವ್ಯತ್ಯಯ ಉಂಟಾಗಲು ಸುಳ್ಯ ನಗರ ಪಂಚಾಯತ್ ನೇರ ಕಾರಣವಾಗಿದೆಯೆಂದು SDPI ಸುಳ್ಯ ನಗರಾಧ್ಯಕ್ಷ ಅಥಾವುಲ್ಲಾ ಸುಳ್ಯ ಆರೋಪಿಸಿದ್ದಾರೆ.
ಕುಡಿಯುವ ನೀರು ಮೂಲಭೂತ ಸೌಕರ್ಯ ವಾಗಿದ್ದರು ಇದರ ಬಗ್ಗೆ ಸುಳ್ಯ ನಗರ ಪಂಚಾಯತ್ ನಿರಂತರವಾಗಿ ನಿರ್ಲಕ್ಷ್ಯ ವಹಿಸಿದ ಕಾರಣದಿಂದಲೇ ಈ ರೀತಿಯ ಘಟನೆಗಳು ನಡೆಯಲು ಕಾರಣವಾಗಿದೆ.
15 ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿಗೆ ಕೋಟ್ಯಂತರ ರುಪಾಯಿ ಮೀಸಲಿಟ್ಟಿದ್ದರು ಅದನ್ನು ಸಮರ್ಪಕವಾಗಿ ಬಳಸದೆ ನಿರ್ಲಕ್ಷ್ಯ ವಹಿಸಿದ ಕಾರಣದಿಂದ ಈ ರೀತಿಯ ಘಟನೆಗಳು ಸಂಭವಿಸಿ ಸುಳ್ಯದ ಜನತೆ ಪರಿತಪಿಸುವಂತಾಗಿದೆ.
SDPI ಪಕ್ಷವೂ ಈ ಕುಡಿಯುವ ನೀರಿನ ವಿಚಾರದ ಬಗ್ಗೆ ನಗರ ಪಂಚಾಯತ್ ನ ಗಮನಕ್ಕೆ ತಂದು ಪ್ರತಿಭಟನೆ ನಡೆಸಿ ಮುನ್ನೆಚ್ಚರಿಕೆ ನೀಡಿದ್ದರು ಇದರ ಬಗ್ಗೆ ನಗರ ಪಂಚಾಯತ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ ಕಾರಣದಿಂದ ಇಂದು ಸುಳ್ಯದ ಜನತೆ ನೀರಿನ ಅಭಾವವದಿಂದ ಬಳಲುವಂತಾಗಿದೆ.
ಹಾಗಾಗಿ ಸಂಬಂಧದ ಪಟ್ಟ ಮೇಲಾಧಿಕಾರಿಗಳು ಈಗಾಗಲೇ ಉಧ್ಬವಿಸಿರುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವುದರ ಜೊತೆಗೆ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಸುಳ್ಯ ನಗರ ಪಂಚಾಯತ್ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಹಾಗೂ ಸುಳ್ಯಕ್ಕ ಸುಸಜ್ಜಿತವಾದ ನೀರು ಶುದ್ಧ ನೀರಿನ ಘಟಕ ಸ್ಥಾಪಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ನಗರ ಸಮಿತಿ ಅಧ್ಯಕ್ಷ ಅಥಾವುಲ್ಲಾ ಸುಳ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.