ಬೆಳ್ತಂಗಡಿ | ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಮಂಡಲ ಹಾಗೂ ಶ್ರಮಿಕ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆಯಲಿದೆ ಭಜನೆ ಸ್ಪರ್ಧೆ | ಗೆದ್ದ ಭಜನಾ ತಂಡಕ್ಕೆ ಸಿಗಲಿದೆ 5 ಲಕ್ಷ ರೂ. ಬಂಪರ್ ಬಹುಮಾನ
ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಮಂಡಲ(ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ) ಹಾಗೂ ಶ್ರಮಿಕ ಸೇವಾ ಟ್ರಸ್ಟ್ ಇದರ ನೇತೃತ್ವದಲ್ಲಿ, “ಭಜನೆ” ಭಗವಂತನಿಗೆ ಭಕ್ತಿಯ ಸಮರ್ಪಣೆ, ಎಂಬ ವಿನೂತನ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ತಾಲೂಕಿನ ಹೆಚ್ಚಿನ ಭಜನಾ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿನಂತಿಸಿಕೊಳ್ಳಲಾಗಿದೆ.
ಶಾಸಕ ಹರೀಶ್ ಪೂಂಜಾ ಇವರ ಮುತುವರ್ಜಿಯಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ತಂಡಕ್ಕೆ 5 ಲಕ್ಷ , ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 2.5 ಲಕ್ಷ ಹಾಗೂ ಉತ್ತಮ ಪ್ರದರ್ಶನ ನೀಡಿದ ಐದು ತಂಡಗಳಿಗೆ ತಲಾ ಒಂದೊಂದು ಲಕ್ಷ ಭರ್ಜರಿ ಬಹುಮಾನ ಕೂಡ ಘೋಷಣೆಯಾಗಿದೆ. ಸ್ಪರ್ಧೆಯಲ್ಲಿ ಭಜನಾ ತಂಡವನ್ನು ನೋಂದಾವಣೆಗೊಳಿಸಲು ನವೆಂಬರ್ 1 ರಿಂದ ಡಿಸೆಂಬರ್ 15ರ ವರೆಗೆ ಕಾಲಾವಕಾಶ ನೀಡಲಾಗಿದೆ.
ಸೂಚನೆಗಳು ಇಂತಿವೆ:
*ಪುರುಷರ ಕುಣಿತ ಭಜನೆ ತಂಡದಲ್ಲಿ ಕನಿಷ್ಠ 12 ಜನ ಪಾಲ್ಗೊಳ್ಳುವುದು
*ಮಹಿಳೆಯರ ಕುಳಿತು ಮಾಡುವ ಭಜನಾ ತಂಡದಲ್ಲಿ ಕನಿಷ್ಟ 25 ಜನ ಸ್ಪರ್ಧಿಗಳು ಭಾಗಹಿಸುವುದು
*15 ವರ್ಷದ ಕೆಳಗಿನ ಮಕ್ಕಳ ಕುಳಿತು ಮಾಡುವ ಭಜನಾ ತಂಡದಲ್ಲಿ ಕನಿಷ್ಟ 25 ಸಂಖ್ಯೆ ಇರತಕ್ಕದ್ದು
*ತಾಳ ಹಾಗೂ ತಮ್ಕಿಯನ್ನು ಹೊರತುಪಡಿಸಿ ಇನ್ನಿತರ ಯಾವುದೇ ಸಂಗೀತ ಪರಿಕರಗಳನ್ನು ಕೂಡ ಬಳಸುವಂತಿಲ್ಲ.
*ಒಂದು ಮಂಡಳಿಯು 60 ನಿಮಿಷಗಳ ಪ್ರದರ್ಶನ ನೀಡುವುದು.(ಕುಣಿತ ಭಜನೆ 20ನಿಮಿಷ, ಮಹಿಳೆಯರ ಕುಳಿತು ಭಜನೆ 20ನಿಮಿಷ ಮತ್ತು 15 ವರ್ಷದ ಕೆಳಗಿನ ಮಕ್ಕಳ ಕುಳಿತು ಮಾಡುವ ಭಜನೆ 20 ನಿಮಿಷ )
*ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಭಜನಾ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುವುದು
*ಭಜನಾ ಮಂಡಳಿಯ ಸ್ವಚ್ಛತೆ ಮತ್ತು ಅಲಂಕಾರಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುವುದು
*ದಾಸರ ಪದಗಳಿಗೆ ಪ್ರಮುಖ ಆದ್ಯತೆಯನ್ನು ನೀಡಲಾಗುವುದು
*ಭಾಗವಹಿಸುವ ಮಂಡಳಿಯು ಮೂರು ವಿಭಾಗಗಳಲ್ಲಿಯೂ ಕಡ್ಡಾಯವಾಗಿ ಭಾಗವಹಿಸುವುದು
ಜನವರಿ 1ನೇ ತಾರೀಖಿನ ನಂತರ ಆಯೋಜಕರ ಸೂಚನೆಯಂತೆ ಸ್ಪರ್ಧೆ ಆರಂಭಗೊಳ್ಳಲಿದೆ. ಆಯೋಜಕರ ಹಾಗೂ ತೀರ್ಪುಗಾರರ ನಿರ್ಧಾರ ಅಂತಿಮವಾಗಿರುತ್ತದೆ. 9632863443 ಈ ಸಂಖ್ಯೆಗೆ ಕರೆ ಮಾಡಿ ಭಜನಾ ತಂಡದ ನೋಂದಾವಣೆ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ನವೀನ್ ನೆರಿಯ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ, 9741036849 ಹಾಗೂ ಮಂಜುನಾಥ ಶೆಟ್ಟಿ ನಿಡಿಗಲ್, ನಿಕಟಪೂರ್ವ ಅಧ್ಯಕ್ಷರು, ಭಜನಾ ಪರಿಷತ್, ಬೆಳ್ತಂಗಡಿ, 9448060940 ಇವರನ್ನು ಸಂಪರ್ಕಿಸಬಹುದು.