ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ | ಮೂರು ವರ್ಷದ ಹಿಂದೆ ಈತನ ತಂದೆಯೂ ಆತ್ಮಹತ್ಯೆ ಮಾಡಿದ್ದರು

ಮಂಗಳೂರು : ಎಸೆಸೆಲ್ಸಿಯ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಜೆಪ್ಪು ಕುಡುಪಾಡಿಯಲ್ಲಿ ನಡೆದಿದೆ.

ಜೆಪ್ಪು ಕುಡುಪಾಡಿ ನಿವಾಸಿ, ಎಸೆಸೆಲ್ಸಿ ವಿದ್ಯಾರ್ಥಿ ಅನಿಶ್ ಪಿ. ಪಾಯಲ್ (16) ಆತ್ಮಹತ್ಯೆ ಮಾಡಿಕೊಂಡ ಬಾಲಕ. ದಿ.ಪ್ರಶಾಂತ್ ಪಾಯಲ್ ಎಂಬವರ ಪುತ್ರ ಅನಿಶ್ ಯಾವುದೋ ಕಾರಣದಿಂದ ಮನನೊಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಶಾಂತ್ ಪಾಯಲ್ ಮೂರು ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದು, ಆ ಬಳಿಕ ಅನಿಶ್ ಮಾನಸಿಕವಾಗಿ ನೊಂದುಕೊಂಡಿದ್ದ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.