ಕಾರ್ಕಳ ಪುರಸಭಾ ಮುಖ್ಯ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಪಕ್ಷ ಕಾಂಗ್ರೆಸ್ ಪ್ರತಿಭಟನೆ

ಕಾರ್ಕಳ : ಕಾರ್ಕಳ ಪುರಸಭಾ ಮುಖ್ಯ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಪಕ್ಷ ಕಾಂಗ್ರೆಸ್ಸಿನ
ಸದಸ್ಯರು ವಿಪಕ್ಷದ ಮುಖಂಡ ಅಶ್ಪಾಕ್ ಅಹ್ಮದ್ ಅವರ‌ ನೇತೃತ್ವದಲ್ಲಿ ಸೋಮವಾರ ನಡೆದ ಪುರಸಭಾ ಮಾಸಿಕ ಸಭೆಯಲ್ಲಿ ಸದನ ಬಾವಿಗಿಳಿದು ಪ್ರತಿಭಟನೆ ನಡೆಸಿದರು
ಒಳಚರಂಡಿ ಕಾಮಗಾರಿ ಅವೈಜ್ಞಾನಿಕ ವಿಧಾನ ದಲ್ಲಿ ನಡೆಸಿರುವುದರಿಂದ ರಸ್ತೆ ಗುಂಡಿಗಳಿಂದ ತುಂಬಿ ಹೋಗಿದೆ.ಈ ಬಗ್ಗೆ ಹಲವಾರು ಬಾರಿ ದೂರುಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಇದನ್ನು ಸರಿಪಡಿಸುವ ವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.

 

ಪುರಸಭೆಯ ವಿಪಕ್ಷ ಸದಸ್ಯ ಶುಭದ ರಾವ್ ಮಾತನಾಡಿ, ಗುಂಡಿಗಳಿಂದಾಗಿ‌ ಯಾವುದೇ ವಾಹನಗಳು ಸಂಚರಿಸಲು ಸಾದ್ಯವೇ ಇಲ್ಲದಾಗಿದೆ ಕಾರ್ಕಳ ದ ಮುಖ್ಯರಸ್ತೆ, ಮಣ್ಣಗೋಪುರ, ಮೂರು ಮಾರ್ಗ , ಮಂಗಳೂರು ರಸ್ತೆ , ಸಂಪೂರ್ಣ ಹದಗೆಟ್ಟಿದ್ದು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು ಉಳಿದಂತೆ ವಿಪಕ್ಷ ಸದಸ್ಯರಾದ‌ ವಿನ್ನಿಬೋಲ್ಡ್ಙ,ರೆಹಮತ್ ಎನ್ ಶೇಖ್, ಸೋಮನಾಥ ನಾಯ್ಕ,ಪ್ರತೀಮಾ ರಾಣೆ ,ನಳಿನಿ ಆಚಾರ್ಯ, ಹರೀಶ್ ದೇವಾಡಿಗ,ಪ್ರಭಾ ಕಿಶೋರ್ ಸಾಥ್ ನೀಡಿದರು.

ಈ ಸಂಧರ್ಭದಲ್ಲಿ ಅಧ್ಯಕ್ಷೆ ಸುಮಾ ಕೇಶವ್,ಮಾತನಾಡಿ‌ ಮಳೆಗಾಲ‌,ಅಕಾಲಿಕ ಮಳೆ ಯಿಂದಾಗಿ ಕೆಲಸಗಳು ನಿಗದಿತ ಸಮಯದಲ್ಲಿ ನಡೆಸಲು‌ ಅಸಾಧ್ಝ ಸಂಬಂದ‌ಪಟ್ಡ ಗುತ್ತಿಗೆ ದಾರರಿಗೆ ಸರಿಪಡಿಸುವಂತೆ ತಿಳಿಸಲಾಗಿದೆ. ಮಾತ್ರವಲ್ಲ ಉಳಿದ ಕಡೆಗೂ ಪ್ಯಾಚ್ ನ್ನು ಮಾಡಲು ಬೇರೆ ನಿಧಿಯಿಂದ ಹಣ ವಿನಿಯೋಗಿಸಲಾಗುವುದು ಈ ಬಗ್ಗೆ ಕ್ರಿಯಾಯೋಜನೆ ಮಾಡಲಾಗಿದೆ. ಮಳೆ ಕಡಿಮೆ ಆದ ನಂತರ ಕೆಲಸ ಪ್ರಾರಂಭಿಸಿಸಲಾಗುವುದು, ಇದಕ್ಕೆ ವಿಪಕ್ಷ ಸಂಪೂರ್ಣ ಸಹಕಾರ ಮಾಡುವಂತೆ ಮನವಿ ಮಾಡಿದರು.

ಇದಕ್ಕೆ ಒಪ್ಪಿದ ವಿಪಕ್ಷ ಸದಸ್ಯರು ಕಾಮಗಾರಿ ನಡೆಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಸದ್ಯಕ್ಕೆ ಅಧ್ಯಕ್ಷ ರ ಮಾತಿಗೆ ಗೌರವ ಸೂಚಕವಾಗಿ ಪ್ರತಿಭಟನೆಯನ್ನು ಹಿಂಪಡೆದು ಮಾಸಿಕ ಸಭೆಯಲ್ಲಿ ಭಾಗವಹಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯಿ ಸಮಿತಿಯ ಅಧ್ಯಕ್ಷ ಲಕ್ಷ್ಮಿ ನಾರಾಯಣ ಮಲ್ಯ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು
ಆಡಳಿತ ಪಕ್ಷದ ಸದಸ್ಯರಾದ ಯೋಗಿಶ್ ದೇವಾಡಿಗ ,ಶೋಭಾ ದೇವಾಡಿಗ, ಪ್ರದೀಪ್ ಮಾರಿಗುಡಿ, ನೀತಾ ಆಚಾರ್ಯ, ಮಮತಾ, ಶಶಿಕಲಾ ಶೆಟ್ಟಿ, ಭಾರತೀ ಅಮೀನ್, ಮೀನಾಕ್ಷಿ ಗಂಗಾಧರ್, ನಾಮನಿರ್ದೇಶನ ಸದಸ್ಯರಾದ ಅವಿನಾಶ್ ಶೆಟ್ಟಿ, ಪ್ರಸನ್ನ, ಸಂತೋಷ್ ರಾವ್,ಅಶೋಕ್ ಸುವರ್ಣ, ಸಂಧ್ಯಾ ಮಲ್ಯ ಉಪಸ್ಥಿತರಿದ್ದರು.

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ | ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಎಲ್ಯಾಸ್ ಪಿಂಟೋ ಬಂಧನ

Leave A Reply

Your email address will not be published.