ಬೆಂಗಳೂರು :ಅಪಘಾತದ ತೀವ್ರತೆಗೆ ತಾಯಿ ಮಗುವಿನ ದೇಹಗಳು ರಸ್ತೆಮಧ್ಯೆಯೇ ಛಿದ್ರಛಿದ್ರವಾಗಿತ್ತು!!ಸಹಾಯಕ್ಕಾಗಿ ಗಂಡ ಅಂಗಲಾಚಿದರೂ ಯಾರೊಬ್ಬರೂ ಹತ್ತಿರ ಸುಳಿಯಲಿಲ್ಲ

ರಸ್ತೆ ಮಧ್ಯೆ ಭೀಕರ ಅಪಘಾತ, ಆ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ರಸ್ತೆಮಧ್ಯೆಯೇ ಹೆಣವಾದ ತಾಯಿ ಮಗು ಇಬ್ಬರ ತಲೆಯ ಮೇಲೆ ಲಾರಿಯ ಚಕ್ರ ಹರಿದು ತಲೆಯ ಗುರುತು ಸಿಗದಂತೆ ಅಪ್ಪಚ್ಚಿಯಾಗಿತ್ತು.ತನ್ನವರನ್ನು ಕಳೆದುಕೊಂಡು ಗಂಡ ಸಹಾಯಕ್ಕಾಗಿ ಅಂಗಲಾಚಿದರೂ ಯಾರೊಬ್ಬನೂ ಆತನ ಹತ್ತಿರ ಸುಳಿಯಲಿಲ್ಲ. ಆತನ ಸಹಾಯಕ್ಕೆ ಕೊನೆಗೆ ಪೊಲೀಸರೇ ಬರಬೇಕಾಯಿತು.ಅಪಘಾತ ನಡೆದ ಸ್ಥಳದಲ್ಲಿ ಮಾನವೀಯತೆ ಸತ್ತು ಹೋಗಿತ್ತು.

ಹೌದು, ಬೆಂಗಳೂರಿನ ಕೆ.ಆರ್. ಪುರದ ನಿವಾಸಿಗಳಾದ ದಂಪತಿಗಳಿಬ್ಬರು ತಮ್ಮ ಪುಟ್ಟ ಕಂದಮ್ಮನೊಂದಿಗೆ ಬೈಕಿನಲ್ಲಿ ತೆರಳುತ್ತಿರುವಾಗ ವೇಗವಾಗಿ ಬಂದ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಗು ಹಾಗೂ ತಾಯಿ ರಸ್ತೆಗೆ ಬಿದ್ದಿದ್ದು,ಗಂಡ ಅಲ್ಲೇ ಪಕ್ಕಕ್ಕೆ ಬಿದ್ದಿದ್ದಾನೆ. ರಸ್ತೆಗೆ ಬಿದ್ದ ತಾಯಿ ಮಗುವಿನ ತಲೆಯ ಮೇಲೆಯೇ ಲಾರಿ ಹರಿದು ಅರೆಕ್ಷಣದಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಕಣ್ಣೆದುರೇ ಅಪ್ಪಚ್ಚಿಯಾದ ತಣ್ಣವಳ ಹಾಗೂ ಇನ್ನೂ ಜಗವನ್ನರಿಯದ ಪುಟ್ಟ ಕಂದಮ್ಮನ ದೇಹಗಳನ್ನು ಕಂಡು ಗಂಡನ ರೋದನೆ ಮುಗಿಲುಮುಟ್ಟಿತ್ತಾದರೂ ಯಾರೊಬ್ಬರೂ ಆತನ ಸಹಾಯಕ್ಕೆ ಧಾವಿಸಿ ಬಂದಿರಲಿಲ್ಲ. ಹೆಣದ ನಡುವೆಯೇ ಛಿದ್ರ ಛಿದ್ರವಾದ ದೇಹಗಳನ್ನು ಸರಿಸಿಕೊಂಡು ಸಾವಿರಾರು ವಾಹನಗಳು ಚಲಿಸಿದ್ದವಾದರೂ ಗಂಡನ ರೋಧನೆ, ಸಹಾಯಕ್ಕೆ ಅಂಗಲಾಚುವ ಪರಿ ಎಂತವರನ್ನೂ ಅರೆಕ್ಷಣ ಕಣ್ಣಲ್ಲಿ ನೀರು ತರಿಸುತ್ತದೆ. ಬೆಂಗಳೂರಿನ ಜನರ ಅಮಾನವೀಯ ವರ್ತನೆಗೆ ಎಲ್ಲೆಡೆಯಿಂದಲೂ ಆಕ್ರೋಶ ವ್ಯಕ್ತವಾಗಿದ್ದು ಮಾನವ ಕುಲಕ್ಕೇ ಇದೊಂದು ಕಪ್ಪುಚುಕ್ಕೆಯಾಗಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಅಪಘಾತವೆಸಗಿದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: