ಮೊಬೈಲನ್ನೇ ನುಂಗಿದ ಭೂಪ | ಆರು ತಿಂಗಳುಗಳ ಕಾಲ ಆತನ ಹೊಟ್ಟೆಯಲ್ಲಿಯೇ ಇತ್ತಂತೆ ಮೊಬೈಲ್ ಫೋನ್!!
ಜಗತ್ತಿನ ಒಂದೊಂದು ಮೂಲೆಯಲ್ಲಿ ಒಂದೊಂದು ರೀತಿಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಈ ರೀತಿಯ ಚಿತ್ರ ವಿಚಿತ್ರ ಘಟನೆಗಳು ಪ್ರಪಂಚದಾದ್ಯಂತ ಪಸರಿಸುತ್ತಿವೆ. ಹಾಗೆಯೇ ವಿಚಿತ್ರ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ.
ಆಕಸ್ಮಿಕವಾಗಿ ಒಬ್ಬ ವ್ಯಕ್ತಿ ಮೊಬೈಲ್ ಫೋನ್ ಅನ್ನು ನುಂಗಿಬಿಟ್ಟಿದ್ದಾನೆ. ಆತ 6 ತಿಂಗಳು ಕಾಲ ಈ ವಿಷಯವನ್ನು ಯಾರಿಗೂ ಹೇಳಿಯೇ ಇಲ್ಲ. ವೈದ್ಯರ ಬಳಿ ಹೋಗಿ ಈ ವಿಷಯ ಹೇಳಲು ಆತ ಮುಜುಗರ ಪಟ್ಟುಕೊಂಡಿದ್ದಾನೆ. ಹೀಗಾಗಿ ಬರೋಬ್ಬರಿ 6 ತಿಂಗಳುಗಳ ಕಾಲ ಆತನ ಹೊಟ್ಟೆಯಲ್ಲಿಯೇ ಮೊಬೈಲ್ ಫೋನ್ ಇತ್ತು.
ಹೌದು, ಇದು ವಿಚಿತ್ರವಾದರೂ ನಿಜವಾಗಿಯೂ ನಡೆದಿರುವ ಘಟನೆ. ಮೊಬೈಲ್ ಫೋನ್ ನುಂಗಿದ್ದ ವ್ಯಕ್ತಿ ಆ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಏನಾಗುತ್ತೆ ನೋಡೇ ಬಿಡೋಣ ಅಂತಾ ನಿರ್ಧರಿಸಿದ್ದ ಆತ ಸುಮ್ಮನಾಗಿದ್ದಾನೆ. ಹೀಗೆ 6 ತಿಂಗಳು ಕಳೆದಿವೆ. ಯಾರಿಗೂ ಹೇಳಲೇಬಾರದೂ ಎಂದುಕೊಂಡಿದ್ದ ಆತನ ಯೋಜನೆ ತಲೆಕೆಳಗಾಗಿದೆ. ಆತನ ಹೊಟ್ಟೆಯಲ್ಲಿಯೇ ಫೋನ್ ಸಿಲುಕಿಕೊಂಡಿದ್ದರಿಂದ ಸೇವಿಸುವ ಆಹಾರವು ಸರಿಯಾಗಿ ಜೀರ್ಣವಾಗಿಲ್ಲ. ಪರಿಣಾಮ ಆತ ಹೊಟ್ಟೆಯಲ್ಲಿ ಒಂದು ರೀತಿಯ ತ್ರಾಸದಾಯಕ ಪರಿಸ್ಥಿತಿ ಅನುಭವಿಸಿದ್ದಾನೆ.
ಆತ ಮೊಬೈಲ್ ಫೋನ್ ಅನ್ನು ಏಕೆ ನುಂಗಿದ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೊಟ್ಟೆಯಲ್ಲಿಯೇ ಫೋನ್ ಸಿಕ್ಕಿಹಾಕಿಕೊಂಡಿದ್ದರಿಂದ ಪರಿಣಾಮ ಆತ ಸೇವಿಸುವ ಆಹಾರ ಸರಿಯಾಗಿ ಪಚನವಾಗಿಲ್ಲ. ಪರಿಣಾಮ ತೀವ್ರ ಹೊಟ್ಟೆನೋವು ಕಾಣಸಿಕೊಂಡಿದೆ. ಇದಕ್ಕೆ ಹೊಟ್ಟೆಯಲ್ಲಿರುವ ಮೊಬೈಲ್ ಫೋನ್ ಕಾರಣವೆಂಬುದು ಆತನಿಗೆ ಮನದಟ್ಟಾಗಿದೆ. ಅಂತಿಮವಾಗಿ ವೈದ್ಯರ ಬಳಿ ಹೋಗಲು ಆತ ನಿರ್ಧರಿಸಿದ್ದಾನೆ.
ಆತನ ಹೊಟ್ಟೆಯ ಎಕ್ಸ್-ರೇ ಸ್ಕ್ಯಾನ್ ಮಾಡಿದ ವೈದ್ಯರು ಹೌಹಾರಿ ಹೋಗಿದ್ದಾರೆ. ಆತನ ಹೊಟ್ಟೆಯಲ್ಲಿ ಫೋನ್ ಇರುವುದು ಕಂಡು ಅವರಿಗೆ ಶಾಕ್ ಆಗಿದೆ. ಇದರ ನಂತರ ವೈದ್ಯರು ತಕ್ಷಣವೇ ಅಸ್ವಾನ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆತನಿಗೆ ಕರುಳು ಮತ್ತು ಹೊಟ್ಟೆಯ ಸೋಂಕು ಸೇರಿ ಅನೇಕ ಮಾರಣಾಂತಿಕ ಸೋಂಕುಗಳ ತಗುಲುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
6 ತಿಂಗಳ ನಂತರ ವ್ಯಕ್ತಿಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತ್ತು
ಒಬ್ಬ ವ್ಯಕ್ತಿ ಇಡೀ ಮೊಬೈಲ್ ಫೋನ್ ನುಂಗಿರುವ ಪ್ರಕರಣವನ್ನು ನಾವು ಇದೇ ಮೊದಲು ನೋಡಿದ್ದು ಎಂದು ತಜ್ಞರು ಹೇಳಿದ್ದಾರೆ. ‘ರೋಗಿಯು 6 ತಿಂಗಳ ಹಿಂದೆ ಆಕಸ್ಮಿಕವಾಗಿ ನುಂಗಿದ ಮೊಬೈಲ್ ಆತನಿಗೆ ಆಹಾರ ಸೇವಿಸಲು ತೊಂದರೆಯನ್ನುಂಟು ಮಾಡಿದೆ. ವ್ಯಕ್ತಿಯ ಆರೋಗ್ಯ ಸ್ಥಿತಿಯ ಬಗ್ಗೆ ಸದ್ಯ ನಾವು ಏನೂ ಹೇಳಲು ಸಾಧ್ಯವಿಲ್ಲ. ಆದರೆ ಆತ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ’ ಎಂದು ವೈದ್ಯರು ಹೇಳಿದ್ದಾರೆ.