ಪುತ್ತೂರು : ವ್ಯಕ್ತಿಗೆ ನಿಂದಿಸಿ ಅವರ ತಾಯಿಗೆ ಹಲ್ಲೆ ಗೈದು ಪತ್ನಿಯ ಮಾನಭಂಗಕ್ಕೆ ಯತ್ನ
ಪುತ್ತೂರು: ಬನ್ನೂರು ಗ್ರಾಮದ ನೀರ್ಪಾಜೆಯಲ್ಲಿ ತಂಡವೊಂದು ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರಿಗೆ ಮತ್ತು ಅವರ ತಾಯಿಗೂ ಹಲ್ಲೆ ನಡೆಸಿ, ಪತ್ನಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದಂತೆ ಪ್ರಕರಣವನ್ನು ತನಿಖೆ ನಡೆಸುವಂತೆ ಪುತ್ತೂರು ನಗರ ಪೊಲೀಸ್ ಠಾಣೆಗೆ ಪುತ್ತೂರು ನ್ಯಾಯಾಲಯ ಆದೇಶಿಸಿದೆ.
ಆ.23 ರಂದು ರಾತ್ರಿ ಬನ್ನೂರು ಗ್ರಾಮದ ನೀರ್ಪಾಜೆಯಲ್ಲಿ ಕೃಷ್ಣಪ್ಪ ಎಂಬವರು ಮನೆಯ ಬಳಿಗೆ ಬಂದ ಪ್ರಶಾಂತ್, ಮಹೇಶ್, ಜಗದೀಶ್, ಸಂತೋಷ್ ಎಂಬವರು ಕೃಷ್ಣಪ್ಪ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿ, ಹಲ್ಲೆ ನಡೆಸಿದಾಗ ತಡೆಯಲು ಹೋದ ತಾಯಿ ಮತ್ತು ಪತ್ನಿಗೆ ಕೈ ಯಿಂದ ಹಲ್ಲೆ ನಡೆಸಿದ್ದಾರೆ. ಕೃಷ್ಣಪ್ಪ ಅವರ ಪತ್ನಿಯನ್ನು ಮಾನಭಂಗಕ್ಕೆ ಯತ್ನಿಸಿದ್ದಾರೆ ಮತ್ತು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಬಳಿಕ ಭಾರತೀಯದಂಡ ಸಂಹಿತೆಯ ಕಲಂ 323, 324, 352,354 503, 504, 506 ಸಹವಾಚ್ಯ ಕಲಂ 34 ರಡಿಯಲ್ಲಿಅಪರಾಧವೆಸಗಿದ ಬಗ್ಗೆ ಆರೋಪಿತರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂಬುದಾಗಿ ಮಾನ್ಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಖಾಸಗಿ ಫಿರ್ಯಾಧಿ ದಾಖಲಿಸಿದ್ದು, ದೂರುದಾರರ ಪರ ವಾದ ಆಲಿಸಿದ ನ್ಯಾಯಾಲಯ ಈ ಕುರಿತಂತೆ ತನಿಖೆ ನಡೆಸಲು ಪುತ್ತೂರು ನಗರ ಠಾಣಾಧಿಕಾರಿಗಳಿಗೆ ಆದೇಶಿಸಿದೆ.
ದೂರುದಾರರ ಪರಚಾಣಕ್ಯ ಚೇಂಬರ್ಸ್ ನ ನ್ಯಾಯವಾದಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್, ಚೇತನಾ ವಿ.ಎನ್, ವಿಮಲೇಶ್ ಸಿಂಗಾರಕೋಡಿ ಮತ್ತು ಅಂಕಿತ ಶರ್ಮ ವಾದಿಸಿದ್ದರು.