ಬರೋಬ್ಬರಿ 20 ವರ್ಷಗಳ ಕಾಲ ಮರದಲ್ಲೇ ಕಾದು ಕೂತು ಉದ್ಯಮಿಯ ಮೇಲೆ ಸೇಡು ತೀರಿಸಿಕೊಂಡ ಗುಂಡು!|ಅಷ್ಟಕ್ಕೂ ಈ ಘಟನೆಯ ಹಿಂದಿರುವ ರಹಸ್ಯವೇನು?

ಹುಟ್ಟು ಸಾವು ಎಲ್ಲಾ ಭಗವಂತನ ಲೀಲೆ.ಯಾರು ಯಾವ ರೀತಿಲಿ ಬದುಕಬೇಕು, ಸಾಯಬೇಕು ಎಂಬುದು ಅವನೇ ಬರೆದ ಹಣೆಬರಹವಷ್ಟೇ.ಆದರೆ ಇಲ್ಲೊಂದು ವಿಚಿತ್ರ ಸಾವು ಸಂಭವಿಸಿದೆ.ಹೌದು. ಇದು ದ್ವೇಷದಿಂದ ಕಾದು ಕೂತ ಗುಂಡಿನ ಕಥೆ.ಅದೇನಂತೀರಾ?

20 ವರ್ಷಗಳ ಹಿಂದೆ ಒಬ್ಬ ವ್ಯಕ್ತಿಯನ್ನು ಸಾಯಿಸೋಕೆ ಆಗದ ಒಂದು ಗುಂಡು ಅವನಿಗಾಗಿ 20 ವರ್ಷಗಳಿಂದ ಒಂದು ಮರದಲ್ಲಿ ಅಡಗಿ ಕುಳಿತುಕೊಂಡಿತ್ತು!ಈ ಘಟನೆ ನಂಬುವುದು ಕಷ್ಟವಾದರೂ ಕೆಲವೊಮ್ಮೆ ಯಾರ ಊಹೆಗೂ ನಿಲುಕದ ವಿಚಿತ್ರ ಈ ಸೃಷ್ಟಿಯಲ್ಲಿ ನಡೆದೇ ಹೋಗುತ್ತದೆ. ಅಂಥದ್ದೇ ಈ ಘಟನೆ ಅಮೆರಿಕದಲ್ಲಿ ನಡೆದಿರೋದು.

ಆತನ ಹೆಸರು ಹೆನ್ರಿ ಜಿಗ್‌ಲ್ಯಾಂಡ್‌. ಈತ ಮರಕ್ಕೆ ಸಂಬಂಧಪಟ್ಟ ಉದ್ಯಮ ನಡೆಸುತ್ತಾ ಇದ್ದ. 20 ವರ್ಷದ ಹಿಂದೆ ಈ ಆಸಾಮಿ ಮ್ಯಾಸಿ ಅನ್ನೋ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದ್ರೆ ಮಾಡೋದೆಲ್ಲಾ ಮಾಡಿದ ನಂತರ ಮದುವೆ ವಿಷಯ ಬಂದಾಗ ನಿರಾಕರಿಸಿಬಿಟ್ಟ.ಇದು ಮ್ಯಾಸಿಗೆ ಸಿಕ್ಕಾಪಟ್ಟೆ ಆಘಾತ ಕೊಟ್ಟಿತು. ಅದನ್ನು ಸಹಿಸಿಕೊಳ್ಳಲು ಆಗದೇ ಅವಳು ಆತ್ಮಹತ್ಯೆ ಮಾಡಿಕೊಂಡಳು.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

ಮ್ಯಾಸಿಗೆ ಒಬ್ಬ ಅಣ್ಣ ಇದ್ದ. ಅವನು ತಂಗಿಯನ್ನು ತುಂಬಾ ಪ್ರೀತಿಸುತ್ತಿದ್ದ. ಮ್ಯಾಸಿ ಸಾಯೋದಕ್ಕೂ ಮುನ್ನ ತನ್ನ ಲವ್‌ ಫೇಲ್ಯೂರ್‌ ವಿಷಯವನ್ನು ಅಣ್ಣನಿಗೆ ಹೇಳಿದ್ದಳು. ತಂಗಿ ಸತ್ತದ್ದನ್ನು ಅರಗಿಸಿಕೊಳ್ಳಲಾಗದೇ ಅವಳ ಅಣ್ಣ, ಈ ಹೆನ್ರಿಯನ್ನು ಹೇಗಾದರೂ ಕೊಲೆ ಮಾಡುವ ಯೋಚನೆ ಮಾಡಿದ.ಹೇಳಿಕೇಳಿ ಹೆನ್ರಿಯದ್ದು ಮರದ ಉದ್ಯಮ. ಆದ್ದರಿಂದ ಆತ ಕಾಡುಗಳಿಗೆ ಆಗಾಗ್ಗೆ ಭೇಟಿ ಕೊಡುತ್ತಾ ಇದ್ದ.

ಇದೇ ಒಳ್ಳೆ ಛಾನ್ಸ್‌ ಅಂದುಕೊಂಡ ಮ್ಯಾಸಿಯ ಅಣ್ಣ, ಹೆನ್ರಿಯನ್ನು ಮುಗಿಸುವ ಉದ್ದೇಶದಿಂದ ಬಂದೂಕು ತೆಗೆದುಕೊಂಡು ಹೆನ್ರಿಯನ್ನು ಫಾಲೋ ಮಾಡುತ್ತಾನೆ. ಹೆನ್ರಿ ಅಲ್ಲಿರುವ ಒಂದು ಮರದ ಬಳಿ ಇದ್ದಾಗ ಮ್ಯಾಸಿ ಅಣ್ಣ ಗುಂಡು ಹಾರಿಸುತ್ತಾನೆ. ಆದರೆ ಆಗ ಅದೃಷ್ಟ ಹೆನ್ರಿಯ ಪರ ಇರುತ್ತದೆ. ಗುಂಡು ಅವನಿಗೆ ತಗಲುವುದೇ ಇಲ್ಲ, ಅದು ಮರಕ್ಕೆ ತಗಲುತ್ತೆ. ಆದರೆ ಆ ಗುಂಡಿನ ಶಬ್ದದಿಂದ ಕಿರುಚಾಡಿದ ಹೆನ್ರಿ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಅವನು ಸತ್ತೇ ಹೋದ ಅಂದ್ಕೊಂಡ ಮ್ಯಾಸಿ ಅಣ್ಣ ಅಲ್ಲಿಂದ ಕಾಲುಕೀಳುತ್ತಾನೆ.

ಹೆನ್ರಿ ಸತ್ತೇ ಹೋದ ಎಂದು ಭಾವಿಸಿದ ಮ್ಯಾಸಿಯ ಅಣ್ಣನಿಗೆ ಒಂದು ರೀತಿಯ ಸಂತೃಪ್ತಿ ಭಾವ ಮೂಡುತ್ತದೆ. ಆದರೆ ಹೆನ್ರಿಯನ್ನು ಕೊಲೆ ಮಾಡಿರುವ ಕಾರಣ, ತನಗೆ ಘೋರಾತಿಘೋರ ಶಿಕ್ಷೆಯಾಗುತ್ತದೆ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.ಇತ್ತ ಹೆನ್ರಿ ಮದುವೆಯಾಗಿ, ಹೆಂಡತಿ, ಮಕ್ಕಳ ಜತೆ ಆರಾಮಾಗಿ ಇರುತ್ತಾನೆ.

ಹೀಗೆ 20 ವರ್ಷ ಕಳೆದೇ ಹೋಗುತ್ತದೆ. ಇಲ್ಲಿಯೇ ಇರುವುದು ಈ ಘಟನೆಗೆ ಟ್ವಿಸ್ಟ್‌! ಅದೊಂದು ದಿನ ಅಂದರೆ ಘಟನೆ ಸಂಭವಿಸಿ 20 ವರ್ಷಗಳ ನಂತರ ಹೆನ್ರಿ ಮರದ ಕೆಲಸಕ್ಕೆಂದು ಅದೇ ಕಾಡಿಗೆ ಹೋಗುತ್ತಾನೆ. ಮರವನ್ನು ಸ್ಫೋಟಿಸಿ ಅದನ್ನು ಉರುಳಿಸುವ ಕೆಲಸ ಅಂದಿನದ್ದಾಗಿತ್ತು. ಅದಕ್ಕಾಗಿ ಆತ ಡೈನಾಮೈಟ್‌ ಬಳಸಿ ತುಂಬಾ ದೂರ ನಿಂತುಕೊಂಡಿರುತ್ತಾನೆ. ಆದರೆ ವಿಧಿಯಾಟ ಅಂದ್ರೆ ಇದೇ ನೋಡಿ. ಆ ಮರ ಸ್ಫೋಟಗೊಳ್ತಿದ್ದಂತೆಯೇ ಅದರಲ್ಲಿ 20 ವರ್ಷಗಳ ಹಿಂದೆ ಅಡಗಿ ಕುಳಿತಿದ್ದ ಅದೇ ಗುಂಡು.ಅಂದರೆ ಮ್ಯಾಸಿಯ ಅಣ್ಣ ಹೊಡೆದಿದ್ದ ಗುಂಡು ನೇರವಾಗಿ ಹೆನ್ರಿಯ ತಲೆಯೊಳಕ್ಕೆ ಹೋಗಿ ಆತ ಸ್ಥಳದಲ್ಲಿಯೇ ಸತ್ತುಹೋಗ್ತಾನೆ!

ಕೆಲ ವರ್ಷಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಹಲವರು ಇದೊಂದು ಕಾಲ್ಪನಿಕ ಕಥೆ ಎನ್ನುತ್ತಿದ್ದಾರೆ. ಆದರೆ ನ್ಯೂಯಾರ್ಕ್‌ನ ಪತ್ರಿಕೆಗಳು ಈ ವಿಚಿತ್ರ ಘಟನೆಯ ಬಗ್ಗೆ ವರದಿ ಮಾಡುತ್ತಿವೆ.

Leave a Reply

error: Content is protected !!
Scroll to Top
%d bloggers like this: