ವಿಮಾನ ಇಳಿಯುತ್ತಿರುವಾಗ ಬಳುಕುವ ನಟಿಯ ಸೊಂಟ ನೋಡಿ ಟೆಂಪ್ಟ್ ಆಗಿ ಸೊಂಟ ಎಳೆದುಕೊಂಡ ಉದ್ಯಮಿ

ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಾಜಿಯಾಬಾದ್‌ನ ಉದ್ಯಮಿಯೊಬ್ಬರು ವಿಮಾನ ಬಂದಿಳಿದು, ತನ್ನ ಆಸನದಿಂದ ಎದ್ದಾಗ ಹಿಂದಿನಿಂದ ನಟಿಗೆ ಕಿರುಕುಳ ನೀಡಿರುವ ಆರೋಪ ನಡೆದಿದೆ.

ಮಹಿಳೆ ಅಕ್ಟೋಬರ್ 3 ರಂದು ದೆಹಲಿಯಿಂದ ಮುಂಬೈಗೆ ವಿಮಾನವನ್ನು ಹತ್ತಿ, ಬೆಳಗ್ಗೆ 11 ಗಂಟೆಗೆ ವಿಮಾನದಿಂದ ಕೆಳಗಿಳಿಯಲು ಎಲ್ಲಾ ಪ್ರಯಾಣಿಕರು ತಮ್ಮ ಆಸನಗಳ ಬಳಿ ನಿಂತಿದ್ದರು.ಮಹಿಳೆ ಮುಂದಿನ ಸಾಲಿನಲ್ಲಿ ಪ್ರಯಾಣಿಕರು ಕೆಳಗಿಳಿಯಲು ಕಾಯುತ್ತಿದ್ದಾಗ, ಯಾರೋ ಅವಳನ್ನು ಸೊಂಟದಿಂದ ಹಿಡಿಯುತ್ತಿರುವಂತೆ ಅನಿಸಿ ಬೆಚ್ಚಿಬಿದ್ದಿದ್ದಾರೆ. ಆರೋಪಿಯು ಮಹಿಳೆಯನ್ನು ತನ್ನ ಕಡೆಗೆ ಎಳೆದುಕೊಂಡಿದ್ದಾನೆ.

ಆರೋಪಿಯ ವರ್ತನೆಯಿಂದ ಕೋಪಗೊಂಡ ಮಹಿಳೆ ತಕ್ಷಣ ರಿಯಾಕ್ಟ್ ಮಾಡಿದ್ದು,ಅಲ್ಲಿರುವ ಕ್ಯಾಬಿನ್ ಸಿಬ್ಬಂದಿಗೆ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ದೂರುದಾರರು ಸ್ಥಳದಲ್ಲೇ ಕೋಪದಿಂದ ಪ್ರತಿಕ್ರಿಯಿಸಿದಂತೆ, ಆರೋಪಿ ಕ್ಷಮೆಯಾಚಿಸಿದ್ದಾನೆ. ತಾನು ಅವಳನ್ನು ಇನ್ನೊಬ್ಬ ಪುರುಷ ಸಹ-ಪ್ರಯಾಣಿಕ ಎಂದು ತಪ್ಪಾಗಿ ಭಾವಿಸಿದ್ದೇನೆ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬಿನ್ ಸಿಬ್ಬಂದಿ ಮಹಿಳೆಯ ದೂರನ್ನು ಸಹಾರ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ. ಕೇಸನ್ನು ಅಧಿಕೃತವಾಗಿ ನೋಂದಾಯಿಸಲಾಗಿದೆ.ಆ ವ್ಯಕ್ತಿಯನ್ನು ಅಕ್ಟೋಬರ್ 14 ರಂದು ವಶಕ್ಕೆ ತೆಗೆದುಕೊಳ್ಳಲಾಯಿತು.

‘ಘಟನೆಯಿಂದ ನಾನು ತುಂಬಾ ಕಂಗಾಲಾಗಿದ್ದೇನೆ’ ಎಂದಿದ್ದಾರೆ ಮಹಿಳೆ. ಆರೋಪಿಯ ಕುಟುಂಬವು ತನ್ನನ್ನು ಸಂಪರ್ಕಿಸಿ, ಪ್ರಕರಣವನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ. ಅವರ ಪತ್ನಿ ಮತ್ತು ಕುಟುಂಬದ ಇನ್ನೊಬ್ಬ ಪುರುಷ ಸದಸ್ಯರು ನನ್ನ ನಿವಾಸಕ್ಕೆ ಬಂದಿದ್ದರು. ದೂರನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸಿದರು. ಅವರಿಗೆ ನನ್ನ ಮನೆಯ ವಿಳಾಸ ತಿಳಿದಿದೆ. ಹಾಗಾಗಿ ಯಾರಾದರೂ ಮತ್ತೆ ಬರಬಹುದೆಂಬ ಭಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Leave A Reply