ರಸ್ತೆ ಬದಿಯಲ್ಲಿ ಜುಟ್ಟು ಹಿಡಿದು ಕಿತ್ತಾಡುತ್ತಿರುವ ನಾರಿಯರು | ಇವರ ಶಕ್ತಿ ಪ್ರದರ್ಶನ ಕಂಡು ನಗೆಗಡಲಲ್ಲಿ ತೇಲಾಡಿದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

 

ವಿಡಿಯೋದಲ್ಲಿ ಇಬ್ಬರು ಮಹಿಳೆಯರ ನಡುವೆ ಜಗಳ ನಡೆಯುತ್ತಿದೆ. ಜುಟ್ಟು ಹಿಡಿದು ಎಳೆದಾಡುತ್ತಿರುವ ಇಬ್ಬರ ದೃಶ್ಯ ಇದೀಗ ಫುಲ್ ವೈರಲ್ ಆಗಿದೆ. ನಾ ಹೆಚ್ಚು ಬಲಶಾಲಿಯೋ ಅಥವಾ ನೀನೋ ಎಂಬುದನ್ನು ನಿರೂಪಿಸುವಂತಿದೆ ವಿಡಿಯೋ. ಇಬ್ಬರು ಮಹಿಳೆಯರು ಕಿತ್ತಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಇಬ್ಬರ ಮಧ್ಯದ ಜಟಾಪಟಿಗೆ ಕಾರಣ ಏನಿರಬಹುದು ಎಂಬ ಮಾಹಿತಿ ತಿಳಿದಿಲ್ಲ. ಆದರೆ ಇಬ್ಬರೂ ಸಹ ಸಿಟ್ಟಿನಿಂದ ಮೊದಲಿಗೆ ಒಬ್ಬರನ್ನೊಬ್ಬರು ಬೈಯುತ್ತಾರೆ. ನಂತರ ಒಬ್ಬರ ಜುಟ್ಟು ಇನ್ನೊಬ್ಬರು ಹಿಡಿದು ಪರಸ್ಪರ ಕಿತ್ತಾಡುತ್ತಾರೆ. ಜಗಳ ವಿಪರೀತಕ್ಕೆ ತಲುಪಿದ್ದು ರಸ್ತೆಯಲ್ಲೆಲ್ಲಾ ಉರುಳಾಡಿದ್ದಾರೆ.

https://www.instagram.com/reel/CVNoNDIM65X/?utm_source=ig_web_copy_link

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ದೃಶ್ಯ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ನೆಟ್ಟಿಗರಲ್ಲಿ ಕೆಲವರು ಇವರನ್ನು ಡಬ್ಲ್ಯೂಡಬ್ಲ್ಯೂಇಗೆ ಕಳುಹಿಸಿ ಎಂದು ತಮಾಷೆ ಮಾಡಿದ್ದಾರೆ. ಮಹಿಳೆಯರಿಗೇ ಹೆಚ್ಚು ಶಕ್ತಿಯಿದೆ, ಜುಟ್ಟು ಹಿಡಿದು ರಸ್ತೆಯಲ್ಲಿ ಕಿತ್ತಾಡುತ್ತಿದ್ದಾರೆ ಎಂದು ಮತ್ತೋರ್ವರು ತಮಾಷೆ ಮಾಡಿದ್ದಾರೆ. ಈ ರೀತಿಯ ವಿಡಿಯೋವನ್ನು ಇದುವರೆಗೆ ನೋಡಿರಲಿಲ್ಲ ಎಂಬ ಪ್ರತಿಕ್ರಿಯೆಗಳನ್ನೂ ಸಹ ಹಂಚಿಕೊಳ್ಳುತ್ತಾ ನಗುವ ಎಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

Leave A Reply

Your email address will not be published.