ನೆಲದ ಮೇಲೆ ಕಡಿದು ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಹಾಲು ಕರೆಯುವ ದನ ಸಾವು
ಬೆಳ್ತಂಗಡಿ : ಕಕ್ಕಿಂಜೆ ವಿದ್ಯುತ್ ಸ್ಟೇಷನ್ ನ ಮುಂಡಾಜೆ ಮೆಸ್ಕಾಂ ಶಾಖಾ ಕಚೇರಿ ವ್ಯಾಪ್ತಿಯ, ಮುಂಡಾಲ ಬೆಟ್ಟಿನ ದೇವಸ್ಯ ಎಂಬಲ್ಲಿ ಕೆಂಪಯ್ಯ ಗೌಡ ಎಂಬವರ ಹಾಲು ಕರೆಯುವ ದನ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಅ. 22 ರಂದು ನಡೆದಿದೆ.
ಹಾಲು ಕರೆಯುವ ಸಂದರ್ಭ ದನದ ಹಗ್ಗವನ್ನು ಬಿಚ್ಚಿದಾಗ ತೋಟದ ಕಡೆ ಓಡಿದ ದನ ಕೃಷಿ ಪಂಪು ಸೆಟ್ಟಿನ ಸಂಪರ್ಕದ ಕಡಿದು ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.
ಸುಮಾರು 35 ಸಾವಿರ ರೂ.ಮೌಲ್ಯದ ಎರಡನೇ ಕರುವಿನ ದನವನ್ನು ಇತ್ತೀಚೆಗಷ್ಟೇ ಖರೀದಿಸಿದ್ದು ಪ್ರತಿದಿನ ಹಾಲು ಉತ್ಪಾದಕರ ಸಂಘಕ್ಕೆ 10ಲೀ.ನಷ್ಟು ಹಾಲು ನೀಡುತ್ತಿದ್ದು, ಮನೆಯವರ ಜೀವನಾಧಾರವಾಗಿತ್ತು.
ಈ ಬಗ್ಗೆ ಮೆಸ್ಕಾಂ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕುಂಬ್ರ : ಕಾಂಗ್ರೆಸ್-ಎಸ್‌ಡಿಪಿಐ ಕಾರ್ಯಕರ್ತರ ಹೊಡೆದಾಟ ,ಪೊಲೀಸರ ಆಗಮನ