ಮೊಬೈಲನ್ನು ಚಾರ್ಜ್ ಗೆ ಹಾಕಿ ಆನ್ಲೈನ್ ತರಗತಿ ಕೇಳುತ್ತಿದ್ದ ವೇಳೆ ಸ್ಫೋಟಗೊಂಡ ಮೊಬೈಲ್ ಫೋನ್, ಬಾಲಕ ಸಾವು
ಕೊರೊನಾದಿಂದಾಗಿ ಇನ್ನೂ ಎಲ್ಲ ಕಡೆ ಶಾಲೆಗಳು ಶುರುವಾಗಿಲ್ಲ. ಕೆಲವು ಕಡೆ ಆನ್ಲೈನ್ ತರಗತಿಗಳು ಮುಂದುವರಿದಿವೆ. ಇದೆ ಆನ್ಲೈನ್ ಕ್ಲಾಸ್ ಬಾಲಕನೊಬ್ಬನ ಜೀವಕ್ಕೆ ಕುತ್ತು ತಂದಿದೆ.
ವಿಯೆಟ್ನಾಂನಲ್ಲಿ ಆಸ್ಟ್ರೇನ್ ಪಾಠ, ಬಾಲಕನ ಪ್ರಾಣ ತೆಗೆದಿದೆ. ಐದನೇ ತರಗತಿ ಓದುತ್ತಿದ್ದ ಬಾಲಕ ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ಮೊಬೈಲ್ ಸ್ಫೋಟಕ್ಕೆ ಬಲಿಯಾಗಿದ್ದಾನೆ.
ನಾಲ್ಕು ಗಂಟೆ ಸುಮಾರಿಗೆ ಬಾಲಕ ಮೊಬೈಲ್ ನಲ್ಲಿ ಆಸ್ಟ್ರೇನ್ ಕ್ಲಾಸ್ ಕೇಳುತ್ತಿದ್ದ. ಹೆಡ್ ಫೋನ್ ಹಾಕಿದ್ದ ಬಾಲಕ, ಮೊಬೈಲ್ ಚಾರ್ಜ್ ಗೆ ಹಾಕಿದ್ದ ಎನ್ನಲಾಗಿದೆ. ಅಚಾನಕ್ ಮೊಬೈಲ್ ಸ್ಫೋಟಗೊಂಡಿದೆ. ಇದರ ಶಬ್ದ ಅಕ್ಕಪಕ್ಕದವರಿಗೆ ಕೇಳಿದೆ. ಅವರು ತಕ್ಷಣ ಅಲ್ಲಿಗೆ ಓಡಿ ಬಂದಿದ್ದಾರೆ. ಆ ವೇಳೆಗಾಗಲೇ ಬಾಲಕನ ಬಟ್ಟೆಗೆ ಬೆಂಕಿ ಹತ್ತಿಕೊಂಡಿತ್ತು ಎನ್ನಲಾಗಿದೆ.
ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ. ಯಾವ ಮೊಬೈಲ್ ಸ್ಫೋಟಗೊಂಡಿದೆ ಹಾಗೂ ಯಾವ ಚಾರ್ಜರ್ ಬಳಸಿದ್ದ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.