ಇನ್ನು ಅಂಕಪಟ್ಟಿಗೆ ತಿಂಗಳುಗಟ್ಟಲೆ ಕಾಯಬೇಕಿಲ್ಲ | ವೆಬ್‌ಸೈಟ್ ಮೂಲಕ ಇ-ಅಂಕಪಟ್ಟಿ ಮಂಗಳೂರು ವಿ.ವಿ. ಕ್ರಮ

ಮಂಗಳೂರು: ಇನ್ನು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ತಿಂಗಳುಗಟ್ಟಲೆ ಕಾಯ ಬೇಕಿಲ್ಲ. ಫಲಿತಾಂಶ ಘೋಷಣೆಯಾದ ಕೆಲವೇ ದಿನಗಳಲ್ಲಿ “ಇ -ಅಂಕಪಟ್ಟಿ’ ವಿ.ವಿ.ಯ ವೆಬ್‌ಸೈಟ್‌ ಮೂಲಕ ದೊರೆಯಲಿದೆ.

Ad Widget

ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಉದ್ಯೋಗ ಅಗತ್ಯಗಳಿಗೆ ಸಹಾಯವಾಗಲಿದೆ. ಫಲಿತಾಂಶ ಘೋಷಣೆ ಯಾದ ತಿಂಗಳೊಳಗೆ ಮೂಲ ಅಂಕಪಟ್ಟಿ ದೊರೆಯಲಿದೆ.

Ad Widget . . Ad Widget . Ad Widget . Ad Widget

Ad Widget

ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪದವಿ ಪರೀಕ್ಷೆ ನಡೆದು ಜುಲೈ ಒಳಗೆ ಫಲಿತಾಂಶ ಬರುತ್ತಿತ್ತು. ಆದರೆ ಈ ಬಾರಿ ಶೇ. 60ರಷ್ಟು ಪರೀಕ್ಷೆ ಎಪ್ರಿಲ್‌ನಲ್ಲಿ ಪೂರ್ಣಗೊಂಡಿದ್ದರೂ ಬಸ್‌ ಬಂದ್‌, ಚುನಾವಣೆ ಮತ್ತು ಕೊರೊನಾದಿಂದ ಉಳಿದ ಪರೀಕ್ಷೆಗಳು ಬಾಕಿಯಾಗಿದ್ದವು. ಹೀಗಾಗಿ ಬೇರೆ ವಿ.ವಿ., ಕಾಲೇಜುಗಳಿಗೆ ಉನ್ನತ ಶಿಕ್ಷಣಕ್ಕಾಗಿ ದಾಖಲಾಗಲು ವಿದ್ಯಾರ್ಥಿಗಳಿಗೆ ತೊಡಕಾಗಿತ್ತು. ಇದನ್ನು ಮನಗಂಡು ಮಂಗಳೂರು ವಿ.ವಿ. ಇ-ಅಂಕಪಟ್ಟಿ ಒದಗಿಸಲು ತೀರ್ಮಾನಿಸಿದೆ.

Ad Widget
Ad Widget Ad Widget

ಇಲ್ಲಿಯ ವರೆಗೆ ವಿ.ವಿ. ವೆಬ್‌ ಸೈಟ್‌ನಲ್ಲಿ ಅಂಕ ಪಟ್ಟಿ ಹಾಕಲಾಗುತ್ತಿತ್ತಾದರೂ ಅದು ತಡವಾಗಿ ಅಪ್‌ಲೋಡ್‌ ಆಗುತ್ತಿತ್ತು. ಜತೆಗೆ ವಿ.ವಿ.ಯ ಮಾನ್ಯತೆ ಸಿಗುತ್ತಿರಲಿಲ್ಲ. ಇನ್ನು ಮುಂದೆ ಇದನ್ನು ಶೀಘ್ರವಾಗಿ ಅಪ್‌ಲೋಡ್‌ ಮಾಡಲು ಮತ್ತು ಮಾನ್ಯತೆ ಒದಗಿಸುವುದಕ್ಕಾಗಿ ಹೊಸ ಸಾಫ್ಟ್ವೇರ್‌ನಲ್ಲಿ ಇ -ಅಂಕಪಟ್ಟಿ ಜಾರಿಗೊಳಿಸಲಾಗುತ್ತದೆ.

Leave a Reply

error: Content is protected !!
Scroll to Top
%d bloggers like this: