ಇನ್ನು ಮುಂದೆ ಮಗುವಿಗೆ ಶಿಕ್ಷಣ ನೀಡುವ ಜವಾಬ್ದಾರಿ ತಂದೆಯದ್ದೇ ಆಗಿರುತ್ತದೆ – ದೆಹಲಿ ಹೈಕೋರ್ಟ್
ಅದೆಷ್ಟೋ ಮಂದಿ ಗಂಡಸರು ತನ್ನ ಮಕ್ಕಳ ಜವಾಬ್ದಾರಿಯನ್ನು ಹೆಂಡತಿಯ ತಲೆಗೆ ಕಟ್ಟಿ ಹೋಗೋ ಅದೆಷ್ಟೋ ಪ್ರಸಂಗಗಳು ನಡೆದಿದೆ. ಆದ್ರೆ ಇನ್ನು ಮುಂದೆ ಮಗನಿಗೆ 18 ವರ್ಷವಾಗಲಿ ಅಥವಾ ಮೇಜರ್ ಆಗಲಿ ತಂದೆ ತನ್ನ ಕರ್ತವ್ಯಗಳಿಂದ ಓಡಿಹೋಗಬಾರದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಮಗುವಿಗೆ ಶಿಕ್ಷಣ ನೀಡುವ ಜವಾಬ್ದಾರಿ ತಂದೆಯ ಮೇಲೆ ಶಾಶ್ವತವಾಗಿರುತ್ತದೆ ಮತ್ತು ಆರ್ಥಿಕ ಹೊರೆ ತಾಯಿಯ ಮೇಲೆ ಹೇರಬಾರದು.ಮಕ್ಕಳ ಪ್ರತಿಯೊಂದು ಹೆಜ್ಜೆಯ ಜವಾಬ್ದಾರಿ ತಂದೆಯದ್ದು ಆಗಿರುತ್ತದೆ. ಅಲ್ಲದೇ ದೆಹಲಿ ಮೂಲದ ದಂಪತಿ ವಿಚ್ಛೇದನ ಪಡೆದ ನಂತರ ತಂದೆ ತನ್ನ ಮಗನ ಶಿಕ್ಷಣಕ್ಕಾಗಿ ತಿಂಗಳಿಗೆ 15,000 ರೂ.ಪಾವತಿಸಬೇಕು ಎಂದು ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು.