ಆನ್ಲೈನ್ ಗೇಮ್ಸ್ ಆಡುತ್ತಾ ಮಾನಸಿಕ ಸಮತೋಲನ ಕಳೆದುಕೊಂಡ ಬಾಲಕ | ಪಬ್ಜಿ, ಫ್ರೀ ಫೈರ್ ಆಟ ಆಡುತ್ತಾ ತನ್ನ ಜೀವನದ ಆಟದ ಪರಿವೇ ಇಲ್ಲದಾಗಿದೆ ಈತನಿಗೆ !!
ಸಾಗರ್ :ಇದೀಗ ಅಂತೂ ಪ್ರತಿಯೊಬ್ಬ ವ್ಯಕ್ತಿಯು ಮೊಬೈಲ್ ಫೋನ್ ಅನ್ನು ಹೊಂದಿದ್ದಾನೆ.ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಳಕೆಯಲ್ಲಿದೆ. ಅದರಲ್ಲೂ ಇಂದಿನ ಯುವ ಜನತೆ ಆನ್ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದು ಅಂತೂ ಸುಳ್ಳಲ್ಲ.ಗ್ಯಾಜೆಟ್ ಗೆ ವ್ಯಸನಿಯಾಗಿರುವ ಮತ್ತು ಅದು ಇಲ್ಲದೆ ಬದುಕಲು ಸಾಧ್ಯವಿಲ್ಲದ ಅನೇಕ ಜನರು ಸಹ ಇದ್ದಾರೆ.ಇದೇ ರೀತಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಮಾಲ್ಥಾನ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ.
17 ವರ್ಷದ ಹುಡುಗನೊಬ್ಬ PUB-G ಮತ್ತು ಫ್ರೀ ಫೈರ್ ಆಟಗಳನ್ನು ಆಡುವ ವ್ಯಸನದಿಂದಾಗಿ,ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾನೆ.ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈತ ಮೊಬೈಲ್ ನಲ್ಲಿ PUB-G ಆಟ ಮತ್ತು ಫ್ರೀ ಫೈರ್ ಆಟವನ್ನು ಆಡಲು ಎಷ್ಟು ವ್ಯಸನಿಯಾಗಿದ್ದಾನೆಂದರೆ ಅವನ ಮಾನಸಿಕ ಸ್ಥಿತಿ ಕೂಡ ಹದಗೆಟ್ಟಿದೆ.
ಬಾಲಕ ಪ್ರತಿ ರಾತ್ರಿ ಮೊಬೈಲ್ ನಲ್ಲಿ ಆಟ ಆಡುತ್ತಿದ್ದನು, ಇದರಿಂದಾಗಿ ಅವನ ಸ್ಥಿತಿ ಹದಗೆಟ್ಟಿದೆ ಎಂದು ತಿಳಿದು ಬಂದಿದೆ.ಇಷ್ಟೇ ಅಲ್ಲ, ಕುಟುಂಬದ ಪ್ರಕಾರ,ಆತ ಆಟವನ್ನು ಎಲ್ಲದರಲ್ಲೂ ನೋಡಲು ಪ್ರಾರಂಭಿಸಿದ್ದಾನೆ.ಆಟವನ್ನೇ ನಿಜ ಜೀವನ ಎಂದು ನಂಬಲು ಆರಂಭಿಸಿದ್ದಾನೆ. ಅದಕ್ಕಾಗಿ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ವೈದ್ಯರು ಹೇಳುತ್ತಾರೆ.