ಭಾರತದ ಮೊದಲ ಆಲ್ಕೋಹಾಲ್ ಮ್ಯೂಸಿಯಂ | ತೆರೆದುಕೊಂಡ ಶತಮಾನಗಳಷ್ಟು ಹಳೆಯ ಮದ್ಯ ಲೋಕ !

Share the Article

ಇಲ್ಲಿಯತನಕ ಭಾರತದಲ್ಲಿ ಈ ಥರದ ಮ್ಯೂಸಿಯಂ ಇರಲಿಲ್ಲ. ಮದ್ಯಪ್ರಿಯರು ಭಾರತದಲ್ಲಿ ಇಲ್ಲ ಎಂದಲ್ಲ, ಆದರೆ ಒಟ್ಟಾರೆ ಮದ್ಯದ ವಿಭಾಗಕ್ಕೆ ಸೇರಿದ ಹಲವು ಪರಿಕರಗಳಿಗಾಗೆ ಮೀಸಲಾದ ಮ್ಯೂಸಿಯಂ ತೆರೆಯುವ ಉತ್ಸಾಹ ಯಾರೂ ತೋರಿಸಿರಲಿಲ್ಲ. ಇದೀಗ ಅದು ನಡೆದಿದೆ. ವಿಶೇಷವಾಗಿ ಮದ್ಯಪ್ರಿಯರಲ್ಲಿ ಆಸಕ್ತಿ ಮೂಡಿಸಬಲ್ಲ ಭಾರತದ ಮೊಟ್ಟಮೊದಲ ‘ ಆಲ್ಕೋಹಾಲ್ ಮ್ಯೂಸಿಯಂ’ ಗೋವಾದಲ್ಲಿ ನಿರ್ಮಾಣವಾಗಿದೆ.

ಮದ್ಯ ಪ್ರಿಯ ಉತ್ತರ ಗೋವಾದ ಕ್ಯಾಂಡೋಲಿಂನಲ್ಲಿ ನಂದನ್ ಕುಡ್‌ಚಡ್ಕರ್ ಎಂಬ ಸ್ಥಳೀಯ ಬಿಸಿನೆಸ್‌ಮನ್ ಅವರು ಈ ‘ಆಲ್ ಎಬೌಟ್ ಆಲ್ಕೋಹಾಲ್’ ಎಂಬ ಮ್ಯೂಸಿಯಂ ಅನ್ನು ತೆರೆದಿದ್ದಾರೆ. ಅಲ್ಲಿ ವಿಸ್ಕಿ ವೈನ್ ಬೀರ್ ಮುಂತಾದ ಪಾನೀಯಗಳ ಬಳಕೆ ಮತ್ತು ಶತಮಾನಗಳಷ್ಟು ಹಳೆಯ ಸಾಮಗ್ರಿಗಳ ಸಂಗ್ರಹದ ಅನಾವರಣ ಆಗಿದೆ.

ಈ ಮ್ಯೂಸಿಯಂನಲ್ಲಿ ಶತಮಾನಗಳ ಹಿಂದಿನ ಆಲ್ಕೋಹಾಲ್ ಜಾರ್ ಗಳು, ಬಾಟಲಿಗಳು, ಗ್ಲಾಸ್‌ಗಳು, ಹಂಡೆಗಳು, ತಪ್ಪಳೆಗಳು, ಕುದಿ ಭರಿಸುವ ಪಾತ್ರೆಗಳು, ಪೈಪುಗಳು, ತಾಮ್ರ ಹಿತ್ತಾಳೆಯ ಮಂಡೆಗಳು ಮತ್ತು ಉತ್ಪಾದನಾ ಯಂತ್ರಗಳನ್ನು ಜೋಡಿಸಲಾಗಿದೆ. ವಿವಿಧ ಕಾಲಘಟ್ಟದಲ್ಲಿ ಬಳಸುತ್ತಿದ್ದ ಪಾತ್ರೆ ಪಗಡೆಗಳು ಮತ್ತು ಹಲವು ವಿನ್ಯಾಸದ ಪೆಗ್ ಬಾಟಲಿಗಳನ್ನು ಈ ಮ್ಯೂಸಿಯಂ ಒಳಗೊಂಡಿದೆ.


ಗೋವಾದ ಖ್ಯಾತ ಹಾಗೂ ಪಾರಂಪರಿಕ ಡ್ರಿಂಕ್ ಆದ ಪೆನ್ನಿ ಬಗ್ಗೆ ಕೂಡ ಈ ಮೂಲಕ ಜಗತ್ತಿಗೆ ತಿಳಿಸಲಾಗುವುದು. ಆ ನಿಟ್ಟಿನಲ್ಲಿ ಇದೊಂದು ಪ್ರಯತ್ನ ಎಂದು ಕುಡ್‌ಚಡ್ಕರ್ ಹೇಳಿದ್ದಾರೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Leave A Reply