ಬರೋಬ್ಬರಿ 6.3 ಕೆ.ಜಿ ತೂಕದ ಮಗುವಿಗೆ ಜನ್ಮ ನೀಡಿದ ಮಹಾತಾಯಿ | ವೈದ್ಯ ಲೋಕವನ್ನೇ ಅಚ್ಚರಿಗೆ ನೂಕಿದ ಈ ಘಟನೆ ಇಲ್ಲಿದೆ ನೋಡಿ

ಮಕ್ಕಳು ಜನಿಸುವಾಗ ಉತ್ತಮ ಆರೋಗ್ಯದಿಂದ ಕೂಡಿರಬೇಕೆಂದು ಹೆತ್ತವರು ಬಯಸುತ್ತಾರೆ. ಇದರಲ್ಲಿ ಮಗುವಿನ ತೂಕ ಕೂಡ ಪ್ರಮುಖವಾಗಿರುತ್ತದೆ. ಸಾಮಾನ್ಯವಾಗಿ ನವಜಾತು ಶಿಶುಗಳು 2-3 ಕೆ.ಜಿ. ತೂಕವಿರುತ್ತವೆ. ಆದರೆ ಅಮೆರಿಕದಲ್ಲಿ 6.3 ಕೆ.ಜಿ ತೂಕದ ಮಗುವೊಂದು ಜನಿಸಿ ವೈದ್ಯ ಲೋಕವನ್ನೇ ಅಚ್ಚರಿಗೆ ನೂಕಿದೆ.

 

ಹೌದು, ಅಮೆರಿಕದ ಅರಿಜೋನಾದ ಕಾರಿ ಪಟೋನೈ ಹೆಸರಿನ ಮಹಿಳೆ ಬರೋಬ್ಬರಿ 6.3 ಕೆ.ಜಿ. ತೂಕದ ಫಿನೆ ಹೆಸರಿನ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ. 2 ಗಂಡು ಮಕ್ಕಳ ತಾಯಿಯಾಗಿರುವ ಕಾರಿ, ಈಗಾಗಲೇ 19 ಬಾರಿ ಗರ್ಭಪಾತದಿಂದ ಬಳಲಿದ್ದಾಳಂತೆ.

ಫಿನೆ ಗರ್ಭದಲ್ಲಿದ್ದಾಗ, ಮಗು ಗಾತ್ರ ದೊಡ್ಡವಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಅದು 6 ಕೆ.ಜಿ. ತೂಕದಷ್ಟಿರುತ್ತದೆ ಎಂದು ಅವರು ಊಹಿಸಿರಲಿಲ್ಲವಂತೆ.

ಹಾಗೆಯೇ, ತಮ್ಮ ವೃತ್ತಿ ಜೀವನದಲ್ಲೇ ಇದೇ ಮೊದಲನೇ ಬಾರಿಗೆ ಇಷ್ಟು ತೂಕದ ಮಗುವಿನ ಹೆರಿಗೆ ಮಾಡಿಸಿದ್ದಾಗಿ ವೈದ್ಯರು ಹೇಳಿಕೊಂಡಿದ್ದಾರೆ.

ಏನೇ ಆದರೂ ಇಷ್ಟು ತೂಕದ ಮಗು ಜನಿಸಿರುವುದು ಹಲವರಿಗೆ ಅಚ್ಚರಿ ಮೂಡಿಸಿರುವುದಂತೂ ಸತ್ಯ. ಹಾಗೆಯೇ ಈ ಮಗುವನ್ನು ನೋಡಲು ಸಾಕಷ್ಟು ಜನ ಆಕೆಯನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ. ಮಗು ಹೆಚ್ಚು ತೂಕವಿದ್ದರೂ ಆರೋಗ್ಯವಾಗಿರುವುದು ಹೆತ್ತವರಿಗೆ ಖುಷಿ ತರಿಸಿದೆ.

Leave A Reply

Your email address will not be published.