ಮುಳುಗುತ್ತಿದೆ ದೇವರ ನಾಡು ಕೇರಳ!!ಮಳೆಯ ಆರ್ಭಟಕ್ಕೆ ಉಕ್ಕಿ ಹರಿಯುವ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ ಪ್ರಾಣಿಗಳು

Share the Article

ದೇವರನಾಡು ಕೇರಳದಲ್ಲಿ ಮಳೆಯ ಆರ್ಭಟಕ್ಕೆ ಅಲ್ಲಲ್ಲಿ ಭೂಮಿ ಕುಸಿದು ಅನಾಹುತ ಸಂಭವಿಸಿದ್ದು ಈ ವರೆಗೆ ಆರು ಮಂದಿ ಸಾವನ್ನಪ್ಪಿದರೆ ಹಲವರು ಕಣ್ಮರೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಕೊಟ್ಟಯಂ ಜಿಲ್ಲೆಯ ಇಡುಕಿ, ಕೊಕ್ಕಾಯರ್, ಎರ್ನಕುಲಂ ಸಹಿತ ಹಲವೆಡೆ ಭಾರೀ ಭೂ ಕುಸಿತ ಉಂಟಾಗಿದ್ದು,ಮೀನಾಚಲ್ ಹಾಗೂ ಮನಿಮಲಾ ನದಿಗಳು ಉಕ್ಕಿ ಹರಿಯುತ್ತಿದ್ದೂ ಹಲವು ಪ್ರಾಣಿಗಳು ಅಸಹಾಯಕವಾಗಿ ಕೊಚ್ಚಿಕೊಂಡು ಹೋಗುವ ದೃಶ್ಯ ಕಂಡುಬರುತ್ತಿದೆ.ಇನ್ನೂ ಕೆಲವು ದಿನ ಮಳೆಯ ಪ್ರಮಾಣ ಮುಂದುವರಿಯಲಿದ್ದರಿಂದ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ.

ಇನ್ನೂ ಕಾಣೆಯಾದವರ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳಳಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Leave A Reply