‘ನೀವು ವ್ಯಾಕ್ಸಿನ್ ಕೊಡಲು ಬಂದರೆ ನಾನು ನಾಗರಹಾವು ಬಿಡುತ್ತೀನಿ’ ಎಂದು ಆರೋಗ್ಯ ಸಿಬ್ಬಂದಿಗೆ ಬೆದರಿಸಿದ ಮಹಿಳೆ!!

ಜೈಪುರ :ಕೊರೋನದಿಂದ ಮುಕ್ತಿ ನೀಡುವ ಉದ್ದೇಶದಿಂದ ದೇಶದೆಲ್ಲೆಡೆ ವ್ಯಾಕ್ಸಿನ್ ವಿತರಣೆ ಕಾರ್ಯ ಚುರುಕಾಗಿ ನಡೆಯುತ್ತಿದೆ. ಅಲ್ಲದೇ ಹಲವು ಕಡೆ ಮನೆಗೆ ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಆದರೆ ರಾಜಸ್ಥಾನದಲ್ಲಿ ಮಹಿಳೆಯೊಬ್ಬಳು ವ್ಯಾಕ್ಸಿನ್ ನೀಡಲು ಬಂದ ಸಿಬ್ಬಂದಿಗೆ ಹಾವು ತೋರಿಸಿ ಬೆದರಿಸಿದ್ದಾಳೆ.

Ad Widget

ಹೌದು.ಅಜ್ಮೇರ್ ಜಿಲ್ಲೆಯ ಪಿಸಂಗನ್‍ನ ನಾಗೇಲಾವ್ ಗ್ರಾಮದಲ್ಲಿ ಮನೆಯೊಂದಕ್ಕೆ ಆರೋಗ್ಯ ಸಿಬ್ಬಂದಿ ತೆರಳಿ ಲಸಿಕೆ ನೀಡಲು ಮುಂದಾಗಿದ್ದಾರೆ. ಆದರೆ ಮನೆಯ ಮಹಿಳೆ ಕಮಲಾ ದೇವಿ ಹಾವು ತೋರಿಸಿ ಹೆದರಿಸಿದ್ದಾರೆ. ನೀವು ವ್ಯಾಕ್ಸಿನ್ ಕೊಡಲು ಬಂದರೆ ನಾನು ನಾಗರಹಾವು ಬಿಡುತ್ತೀನಿ ಎಂದು ಬೆದರಿಸಿದ್ದಾರೆ.

Ad Widget . . Ad Widget . Ad Widget . Ad Widget

Ad Widget

ಕೊನೆಗೆ ಹೆದರಿದ ಸಿಬ್ಬಂದಿ ಗ್ರಾಮಸ್ಥರ ಸಹಾಯದಿಂದ ಮಹಿಳೆಯನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಮಲಾ ದೇವಿ ಜೊತೆ ಇನ್ನೂ 20 ಮಂದಿ ಕೂಡ ತಮಗೆ ವ್ಯಾಕ್ಸಿನ್ ಬೇಡ ಎನ್ನುತ್ತಿದ್ದರಂತೆ, ಈಕೆ ವ್ಯಾಕ್ಸಿನ್ ಪಡೆಯುತ್ತಿದ್ದಂತೆ ಅವರು ಕೂಡ ಲಸಿಕೆ ಪಡೆದಿದ್ದಾರೆ. ಇನ್ನೂ, ಕಮಲಾದೇವಿ ಕುಟುಂಬ ಹಾವು ಆಡಿಸುವ ಕಸುಬು ಮಾಡುತ್ತಿದ್ದಾರೆ ಎನ್ನಲಾಗಿದೆ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: