‘NEXT CM ಸಿದ್ದರಾಮಯ್ಯ ‘ ಎಂದು ಬಾಳೆಹಣ್ಣಿನಲ್ಲಿ ಬರೆದು ದೇವಿಯ ರಥಕ್ಕೆ ಎಸೆದ ಅಭಿಮಾನಿ!!

Share the Article

ರಾಯಚೂರು : ಭಕ್ತರ ಆಸೆ ದೇವರು ಈಡೇರಿಸುತ್ತಾರೆ ಎಂಬ ನಂಬಿಕೆಯಿಂದ ಭಕ್ತರೊಬ್ಬರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಬಾಳೆಹಣ್ಣಿನಲ್ಲಿ ಬರೆದು ದೇವಿಯ ರಥಕ್ಕೆ ಎಸೆದ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದಲ್ಲಿ ನಡೆದ ದುರ್ಗಾದೇವಿ ರಥೋತ್ಸವದಲ್ಲಿ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಬಾಳೆಹಣ್ಣಿನ ಮೇಲೆ NEXT CM ಸಿದ್ದರಾಮಯ್ಯ ಎಂದು ಬರೆದು ಬಾಳೆಹಣ್ಣನ್ನು ದುರ್ಗಾದೇವಿ ರಥೋತ್ಸವಕ್ಕೆ ಎಸೆದಿದ್ದಾರೆ.

ಜಾತ್ರಾಮಹೋತ್ಸವದಲ್ಲಿ ರಥೋತ್ಸವಕ್ಕೆ ಬಯಕೆ ಈಡೇರಲೆಂದು ಹಣ್ಣು ಜವಣೆ ಎಸೆಯುವ ಪದ್ದತಿ ಇದೆ. ಈ ವೇಳೆ ಹಸಮಕಲ್ ಗ್ರಾಮದಲ್ಲಿ ಅಭಿಮಾನಿಯೊಬ್ಬರು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Leave A Reply

Your email address will not be published.