ಬೇಯಿಸಿದ ಮೊಟ್ಟೆ ಮಹಿಳೆಯೊಬ್ಬಳನ್ನು ನುಂಗಿ ಹಾಕಿದ ಘಟನೆ

ಹೈದರಾಬಾದ್: ಒಂದು ಸಣ್ಣ ಕೋಳಿ ಮೊಟ್ಟೆ ಮಹಿಳೆಯೊಬ್ಬಳ ಪ್ರಾಣವನ್ನು ನುಂಗಿ ಹಾಕಿದೆ. ಊಟದ ವೇಳೆ ಬೇಯಿಸಿದ ಮೊಟ್ಟೆ ತಿನ್ನುವಾಗ ಮೊಟ್ಟೆ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

ಈ ಘಟನೆ ತೆಲಂಗಾಣದ ನೇರಳಪಲ್ಲಿಯಲ್ಲಿ ನಡೆದಿದ್ದು,
ನೀಲಮ್ಮ ಮೃತ ಮಹಿಳೆ.
ನೀಲಮ್ಮ ಊಟ ಮಾಡುತ್ತಿದ್ದಳು. ಈ ವೇಳೆ ಬೇಯಿಸಿದ ಮೊಟ್ಟೆಯನ್ನು ಕತ್ತರಿಸದೇ, ಹಾಗೇ ದೊಡ್ಡ ಮೊಟ್ಟೆಯನ್ನು ಬಾಯಿಯೊಳಗೆ ಹಾಕಿಕೊಂಡಿದ್ದಾಳೆ. ಈ ವೇಳೆ ಮೊಟ್ಟೆ ನೇರವಾಗಿ ಗಂಟಲಿಗೆ ಹೋಗಿ ಅಲ್ಲಿ ಅನ್ನನಾಳ ಲಾಕ್ ಆಗಿದೆ. ಆಗ ಮೊಟ್ಟೆ ಗಂಟಲಿನಿಂದ ಕೆಳಗೆ ಜಾರದೇ, ಹೊರಗೆ ಕೂಡಾ ಬಾರದೇ ನೀಲಮ್ಮನಿಗೆ ಉಸಿರಾಡಲು ಕಷ್ಟವಾಗಿದೆ. ಅಲ್ಲಿ ವಿಂಡ್ ಪೈಪ್ ಪ್ರೆಸ್ಸ್ ಆದ ಈ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ.
ಯಕಶ್ಚಿತ್ ಒಂದು ಮೊಟ್ಟೆ ಸಾವಿಗೆ ಸಾಧನವಾಗಿದ್ದು ದುರಂತವೇ ಸರಿ. ಮೊಟ್ಟೆಯನ್ನು ಅವಸರದಲ್ಲಿ ತಿನ್ನಲು ಹೋಗದೆ ಕತ್ತರಿಸಿ ತಿಂದಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ ಎಂದು ನೀಲಮ್ಮ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget
error: Content is protected !!
Scroll to Top
%d bloggers like this: