ಶಾಸಕ ಯತ್ನಾಳ್ ಸಿಡಿ ಬಿಡುಗಡೆಗೆ ಕ್ಷಣ ಗಣನೆ,ಸಾಮಾಜಿಕವಾಗಿ ಜಾಲತಾಣದಲ್ಲಿ ಪೋಸ್ಟ್ ವೈರಲ್ | ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರು

Share the Article

‘ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣ ಗಣನೆ, ಭರ್ಜರಿ ಯಶಸ್ಸು ಕಾಣಲಿ’ ಎಂಬ ಬರಹ ಹಾಗೂ ಶಾಸಕ ಯತ್ನಾಳ ಅವರ ಭಾವಚಿತ್ರ ಇರುವ ಅಶ್ಲೀಲ ಪೋಸ್ಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ನಮ್ಮ ಕಾಂಗ್ರೆಸ್ ಎನ್ನುವ ಇನಸ್ಟಾಗ್ರಾಮ್‌ನಲ್ಲಿ ಈ ಫೋಸ್ಟ್ ಹಾಕಲಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್ ಮಿಷನ್ 2023 ಎಂಬ ಫೇಸ್‌ಬುಕ್ ಅಕೌಂಟ್ ನಲ್ಲಿಯೂ ಫೋಟೊ ಹರಿದಾಡುತ್ತಿದೆ. ಬಿಜೆಪಿ ನಾಯಕನ ಸಿರಿ ಬಿಡುಗಡೆಗೆ ಕ್ಷಣಗಣನೆ ಎಂಬ ಈ ಪೋಸ್ಟ್ ಗೆ ಟ್ಯಾಗ್‌ಲೈನ್ ಹಾಕಲಾಗಿದೆ.

ಈ ಕುರಿತು ವಿಜಯಪುರದ ಸೈಬರ್ ( ಸಿಇಎನ್) ಕ್ರೈಂ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಯತ್ನಾಳ್ ಅವರ ಆಪ್ತ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಲಕ್ಷಣ ಜಾಧವ್ ಅವರು ದೂರು ದಾಖಲು ಮಾಡಿದ್ದಾರೆ.

ಶಾಸಕ ಯತ್ನಾಳ ಅವರ ಭಾವಚಿತ್ರ ಹಾಗೂ ಅಶ್ಲೀಲ ಬರಹ ಹರಿದಾಡುತ್ತಿದೆ. ಈ ಮೂಲಕ ಶಾಸಕರಿಗೆ ಅವಮಾನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ದಾಖಲು ಮಾಡಲಾಗಿದೆ.

Leave A Reply