‘ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣ ಗಣನೆ, ಭರ್ಜರಿ ಯಶಸ್ಸು ಕಾಣಲಿ’ ಎಂಬ ಬರಹ ಹಾಗೂ ಶಾಸಕ ಯತ್ನಾಳ ಅವರ ಭಾವಚಿತ್ರ ಇರುವ ಅಶ್ಲೀಲ ಪೋಸ್ಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ನಮ್ಮ ಕಾಂಗ್ರೆಸ್ ಎನ್ನುವ ಇನಸ್ಟಾಗ್ರಾಮ್ನಲ್ಲಿ ಈ ಫೋಸ್ಟ್ ಹಾಕಲಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. ಜೆಡಿಎಸ್ ಮಿಷನ್ 2023 ಎಂಬ ಫೇಸ್ಬುಕ್ ಅಕೌಂಟ್ ನಲ್ಲಿಯೂ ಫೋಟೊ ಹರಿದಾಡುತ್ತಿದೆ. ಬಿಜೆಪಿ ನಾಯಕನ ಸಿರಿ ಬಿಡುಗಡೆಗೆ ಕ್ಷಣಗಣನೆ ಎಂಬ ಈ ಪೋಸ್ಟ್ ಗೆ ಟ್ಯಾಗ್ಲೈನ್ ಹಾಕಲಾಗಿದೆ.
ಈ ಕುರಿತು ವಿಜಯಪುರದ ಸೈಬರ್ ( ಸಿಇಎನ್) ಕ್ರೈಂ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಯತ್ನಾಳ್ ಅವರ ಆಪ್ತ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಲಕ್ಷಣ ಜಾಧವ್ ಅವರು ದೂರು ದಾಖಲು ಮಾಡಿದ್ದಾರೆ.
ಶಾಸಕ ಯತ್ನಾಳ ಅವರ ಭಾವಚಿತ್ರ ಹಾಗೂ ಅಶ್ಲೀಲ ಬರಹ ಹರಿದಾಡುತ್ತಿದೆ. ಈ ಮೂಲಕ ಶಾಸಕರಿಗೆ ಅವಮಾನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ದೂರು ದಾಖಲು ಮಾಡಲಾಗಿದೆ.