ಬೆಳ್ತಂಗಡಿ| ಆಶ್ರಯ ನೀಡುತ್ತಿದ್ದ ಮರವೇ ಬುಡ ಸಮೇತ ಉರುಳಿ ವ್ಯಕ್ತಿ ದುರಂತ ಸಾವು !

ಮನೆಯ ಅಂಗಳದಲ್ಲಿದ್ದ ಮರವೊಂದು ಯಾವುದೇ ಮುನ್ಸೂಚನೆ ಇಲ್ಲದೆ ಬುಡಸಮೇತ ವ್ಯಕ್ತಿಯೊಬ್ಬರ ಮೇಲೆ ಬಿದ್ದು, ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ.

 

ತಾವೇ ಮನೆಯ ಅಂಗಳದಲ್ಲಿ ನೆಟ್ಟು ಬೆಳೆಸಿದ ಮರವೊಂದು ತಮ್ಮ ಜೀವಕ್ಕೆ ಕುತ್ತು ತಂದಿದೆ. ಹೌದು, ಮನೆಯ ಅಂಗಳದಲ್ಲಿದ್ದ ಮರವೊಂದು ಮನೆಯ ಸದಸ್ಯನ ಮೇಲೆ ಬಿದ್ದಿದೆ. ಪರಿಣಾಮ ವ್ಯಕ್ತಿಯ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪುದುವೆಟ್ಟು ಗ್ರಾಮದ ಸಾಮೆದಕಲಪು ವರಸಾರಿ ಮನೆ ನಿವಾಸಿ ಆದಂ ಸಾಹೇಬ್(61) ಮೃತ ದುರ್ದೈವಿ.

ಬುಧವಾರ ಮಧ್ಯಾಹ್ನ ಆದಂ ಸಾಹೇಬ್ ಮನೆಯ ಅಂಗಳದಲ್ಲಿ ನಿಂತುಕೊಂಡಿದ್ದ ವೇಳೆ ಅಂಗಳದ ಬದಿಯಲ್ಲಿದ್ದ ಮರ ಬೇರು ಸಮೇತ ಅವರ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಅವರಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.