ಮದುವೆ ಮನೆಯಲ್ಲಿ ವಧು-ವರರನ್ನು ಎತ್ತಿಕೊಂಡು ಒಮ್ಮೆಲೆ ಕೆಳಗೆ ಬೀಳಿಸಿದ ಸ್ನೇಹಿತ | ನಾಚಿಕೆಯಿಂದ ನಗುತ್ತಾ ಮೇಲೇಳುವ ನವ ಜೋಡಿಗಳ ವಿಡಿಯೋ ಫುಲ್ ವೈರಲ್

Share the Article

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ‌ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ತಮಾಷೆಯ ವಿಡಿಯೋಗಳು ಪ್ರತಿಬಾರಿ ನೆಟ್ಟಿಗರ ಮನಸ್ಸು ಗೆಲ್ಲುತ್ತದೆ. ಅದರಲ್ಲಿಯೂ ಮದುವೆ ಸಮಾರಂಭದಲ್ಲಿ ನಡೆಯುವ ಅದೆಷ್ಟೋ ತಮಾಷೆಯ ವಿಡಿಯೋಗಳು ಹೆಚ್ಚು ಮನ ಗೆಲ್ಲುತ್ತವೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಮದುವೆ ಮನೆಯಲ್ಲಿ ನಡೆದ ಒಂದು ತಮಾಷೆಯ ದೃಶ್ಯ. ಇದನ್ನು ನೋಡಿದ ನೆಟ್ಟಿಗರು ತಮಾಷೆ ಮಾಡಿ ನಗುತ್ತಿದ್ದಾರೆ.

ಮದುವೆ ಆದ ಬಳಿಕ ಸ್ನೇಹಿತ ವರ ಮತ್ತು ವಧುವನ್ನು ಒಟ್ಟಿಗೆ ಎತ್ತಿಕೊಂಡು ಕೆಳಗೆ ಬೀಳಿಸಿದ್ದಾನೆ. ಇಬ್ಬರೂ ಸಹ ನೆಲಕ್ಕೆ ಬಿದ್ದಿದ್ದಾರೆ. ಬದಿಯಲ್ಲಿ ನಿಂತ ಅತಿಥಿಗಳು ದೃಶ್ಯ ನೋಡಿ ನಗುತ್ತಿರುವುದನ್ನು ನೋಡಬಹುದು. ಇದನ್ನು ನೋಡಿದ ನೆಟ್ಟಿಗರು, ಇದು ಅವರ ಆಚರಣೆಗಳಲ್ಲಿ ಒಂದಾಗಿರಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು ವಿಡಿಯೋ ಮಜವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟಿನಲ್ಲಿ ದೃಶ್ಯ ಇದೀಗ ಫುಲ್​ ವೈರಲ್​ ಆಗಿದೆ.

https://www.instagram.com/reel/CUiHf7-FzLc/?utm_medium=copy_link

ನೆಲಕ್ಕೆ ಬಿದ್ದ ವಧು ವರರು ನಗುತ್ತಾ ಮೇಲೆದ್ದುಕೊಂಡಿದ್ದಾರೆ. ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, 51,000 ಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.

Leave A Reply