ಉಪ್ಪಿನಂಗಡಿ:ರಾತ್ರೋ ರಾತ್ರಿ ಹಿಂದೂ ಸಂಘಟನೆಯ ಕಾರ್ಯಕರ್ತನನ್ನು ಠಾಣೆಗೆ ಕರೆದುಕೊಡು ಹೋಗಿ ಹಿಗ್ಗಾಮುಗ್ಗ ಥಳಿಸಿದ ಪೊಲೀಸರು!!!

Share the Article

ವಿನಃ ಕಾರಣ ಉಪ್ಪಿನಂಗಡಿಯ ಹಿಂದೂ ಕಾರ್ಯಕರ್ತನೊಬ್ಬನನ್ನು ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿ, ಆ ಬಳಿಕ ಉನ್ನತ ಅಧಿಕಾರಿಯೊಬ್ಬರು ಆತನನ್ನು ತನ್ನ ಛೇಂಬರ್ ಗೆ ಕರೆಸಿಕೊಂಡು ಹೊಡೆದ ವಿಷಯ ಹೊರೆಗೆಲ್ಲಿಯೂ ಬಾಯಿ ಬಿಡಬೇಡ, ನಿನಗೇನಾದರೂ ಸಮಸ್ಯೆಯಾದಲ್ಲಿ ನನ್ನನ್ನು ಸಂಪರ್ಕಿಸು ಎಂದು ಹೇಳಿ ಬಿಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಪೊಲೀಸರ ಹೊಡೆತದಿಂದ ಗಾಯಗೊಂಡಿರುವ ಯುವಕ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಹಲ್ಲೆಗೈದ ಸಿಬ್ಬಂದಿಗಳ ವಿರುದ್ಧ ಹಿಂದೂ ಸಂಘಟನೆಯ ಪ್ರಮುಖರು ಎಸ್ಪಿ ಗೇ ಮನವಿ ಸಲ್ಲಿಸಿದ್ದಾರೆ.

ಘಟನೆ ವಿವರ: ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಿಂದ 10 ಅಕ್ಟೋಬರ್ ಭಾನುವಾರ ರಾತ್ರಿ ಜಗದೀಶ್ ಎಂಬ ಓರ್ವ ವಿಶ್ವ ಹಿಂದು ಪರಿಷತ್ ಕಾರ್ಯಕರ್ತನನ್ನು ಠಾಣೆಗೆ ವಿನಾಕಾರಣ ಕರೆದುಕೊಂಡು ಹೋಗಿ, ಯಾವುದೋ ಒಂದು ಕಾರಣ ಹಿಡಿದುಕೊಂಡು ಹೋಗಿ, ಠಾಣಾ ಸಿಬ್ಬಂದಿಗಳಾದ ಪ್ರತಾಪ್, ಸಂಗಯ್ಯ, ಮತ್ತು ಶೇಖರ್ ಎಂಬವರು ರಾತ್ರಿ ಪೂರ್ತಿ ಠಾಣೆಯಲ್ಲಿ ಕೂಡಿಹಾಕಿ ಬಟ್ಟೆಕಳಚಿ ದೈಹಿಕ ದೌರ್ಜನ್ಯ ನಡೆಸಿದಲ್ಲದೇ ದೊಣ್ಣೆಯಿಂದ ಹೊಡೆದು, ಬೂಟ್ ಕಾಲಿನಿಂದ ಹೊಡೆದದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ.ನಿನ್ನೆ 11 ಅಕ್ಟೋಬರ್ ಸೋಮವಾರ ಸಂಜೆ ಅವರನ್ನು ಠಾಣೆಯಿಂದ ಬಿಟ್ಟು ಕಳಿಸಿದ್ದು, ಆ ಸಂದರ್ಭದಲ್ಲಿ ಅವರು ನಡೆಯಲಾಗದೆ, ಗಾಯಗೊಂಡಿದಲ್ಲದೇ ತುಂಬಾ ಅಸ್ವಸ್ಥಗೊಂಡಿದ್ದು ಚಿಕಿತ್ಸೆಗಾಗಿ ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ನಿರಪರಾಧಿಯಾದ ಜಗದೀಶನ ಮೇಲೆ ವಿನಾಕಾರಣ ದೈಹಿಕವಾಗಿ ಹಲ್ಲೆ ನಡೆಸಿದ ಸಿಬ್ಬಂದಿಗಳಾದ ಪ್ರತಾಪ್, ಸಂಗಯ್ಯ ಮತ್ತು ಶೇಖರ್ ಎಂಬವರ ಮೇಲೆ ತಕ್ಷಣ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಂಡು ಅವರನ್ನು ಕೆಲಸದಿಂದ ವಜಾ ಮಾಡಬೇಕಾಗಿ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮನವಿ ಸಲ್ಲಿಸಿದಲ್ಲದೇ,ವೆನ್ ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗದೀಶ್ ಅವರನ್ನು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ಉಪಾಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ, ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಭೇಟಿ ಮಾಡಿ ಧೈರ್ಯ ತುಂಬಿದರು.

Leave A Reply