ಸರ್ಜಿಕಲ್ ಸ್ಟ್ರೈಕ್ ನಡೆದೇ ಇಲ್ಲ, ಪ್ರೂಫ್ ಕೊಡಿ ಎಂದು ಕೇಳುತ್ತಿದ್ದ ಕಾಂಗ್ರೆಸ್ ಸೇರಿ ಇತರ ವಿರೋಧಪಕ್ಷಗಳು ಶೇಪ್ ಔಟ್ | ಭಾರತ ದಾಳಿ ನಡೆಸಿತ್ತು ಎಂದು ಖುದ್ದಾಗಿ ಒಪ್ಪಿಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್ !!

ಬಾಲಾಕೋಟ್ ಪ್ರದೇಶದ ವಾಯು ದಾಳಿಯನ್ನು ಇದೀಗ ಪಾಕಿಸ್ತಾನ ಒಪ್ಪಿಕೊಂಡಿದ್ದು, ಇಷ್ಟು ವರ್ಷ ಬಿಲ್ ಕುಲ್ ಆಗಿ ಒಪ್ಪದಿದ್ದ ಸತ್ಯವನ್ನು ತನ್ನ ಬಾಯಿಯಿಂದಲೇ ಹೊರಹಾಕಿದೆ. ಇದರಿಂದ ನಮ್ಮ ದೇಶದಲ್ಲಿಯೂ ಇದನ್ನು ನಂಬದೇ, ಸುಳ್ಳೆಂದು ವಾದಿಸುತ್ತಿದ್ದ ದೇಶದ್ರೋಹಿಗಳಿಗೆ ಭಾರಿ ಮುಖಭಂಗವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ 40 ಯೋಧರು ಹತರಾಗಿದ್ದಕ್ಕೆ ಪ್ರತೀಕಾರವಾಗಿ ಭಾರತ ನಮ್ಮ ದೇಶದ ಬಾಲಾಕೋಟ್‌ ಪ್ರದೇಶದ ಮೇಲೆ ವಾಯುದಾಳಿ ನಡೆಸಿದ್ದು ನಿಜ ಎಂದು ಸ್ವತಃ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಒಪ್ಪಿಕೊಂಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ದಾಳಿಯ ಕುರಿತು ಸ್ವತಃ ಇಮ್ರಾನ್‌ ಖಾನ್‌ ನೀಡಿರುವ ಈ ಹೇಳಿಕೆಯು, ಭಾರತೀಯ ವಾಯುಪಡೆಯ ಸಾಹಸಕ್ಕೆ ಸಾಕ್ಷ್ಯ ಕೇಳಿದ್ದ ವಿಪಕ್ಷ ನಾಯಕರಾದ ರಾಹುಲ್‌ ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮುಂತಾದವರಿಗೆ ಮುಖಭಂಗ ಉಂಟುಮಾಡಿದೆ.

ಮಿಡಲ್‌ ಈಸ್ಟ್‌ ಐ ಎಂಬ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಇಮ್ರಾನ್‌ ಖಾನ್‌, ‘ಕಾಶ್ಮೀರದಲ್ಲಿ ಸಣ್ಣದೊಂದು ತಿಕ್ಕಾಟವಾಗಿತ್ತು. ಅಲ್ಲಿ ಆತ್ಮಾಹುತಿ ದಾಳಿಯೊಂದು ನಡೆದು ಭಾರತದ ಹಲವು ಯೋಧರು ಸಾವನ್ನಪ್ಪಿದ್ದರು. ಅವರು ಘಟನೆಗೆ ನಮ್ಮನ್ನೇ ಹೊಣೆಯನ್ನಾಗಿಸಿದ್ದರು. ಆದರೆ, ನಾವು ಪದೇ ಪದೇ ದಾಳಿಕೋರರ ಕುರಿತು ಸಾಕ್ಷ್ಯ ಕೊಡಿ, ನಾವು ಅವರನ್ನು ಸೆರೆಹಿಡಿದು ಶಿಕ್ಷಿಸುತ್ತೇವೆ, ಬೇಕಿದ್ದರೆ ನಿಮಗೆ ಹಸ್ತಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ಆದರೆ ನಮಗೆ ಸಾಕ್ಷ್ಯ ನೀಡುವ ಬದಲು ಅವರು (ಭಾರತ) ನಮ್ಮ ಮೇಲೆ ಬಾಂಬ್‌ ದಾಳಿ ನಡೆಸಿದರು’ ಎಂದು ಹೇಳಿದ್ದಾರೆ.

‘ಭಾರತದ ದಾಳಿಗೆ ಪಾಕಿಸ್ತಾನ ಕೂಡಾ ತಿರುಗೇಟು ನೀಡಿ, ಭಾರತದ ವಿಮಾನವೊಂದನ್ನು ಹೊಡೆದು ಉರುಳಿಸಿತು. ಆದರೆ ಯಾವುದೇ ಹಂತ ತಲುಪಬಹುದಾಗಿದ್ದ ಪರಿಸ್ಥಿತಿಯನ್ನು ಶಾಂತವಾಗಿಸಲು ಅವರ ಪೈಲಟ್‌ ಅನ್ನು ಸುರಕ್ಷಿತವಾಗಿ ಅವರಿಗೆ ಮರಳಿಸಿದೆವು’ ಎಂದು ಹೇಳುವ ಮೂಲಕ ಭಾರತ ಬಾಲಾಕೋಟ್‌ನ ಉಗ್ರತಾಣಗಳ ಮೇಲೆ ದಾಳಿ ನಡೆಸಿದ ಘಟನೆಯನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ಜೊತೆಗೆ ಪರಮಾಣು ಶಕ್ತಿ ಹೊಂದಿರುವ ಎರಡು ದೇಶಗಳು ಇಂಥ ಸ್ಥಿತಿಯನ್ನು ಎದುರಿಸಿದಾಗ ಪರಿಸ್ಥಿತಿ ಯಾವುದೇ ಹಂತವನ್ನು ಬೇಕಾದರೂ ತಲುಪಬಹುದು ಎನ್ನುವ ಮೂಲಕ, ಭಾರತ ನಡೆಸಿದ ಬಾಲಾಕೋಟ್‌ ದಾಳಿ ಉಭಯ ದೇಶಗಳ ನಡುವಿನ ಪರಮಾಣು ಬಾಂಬ್‌ ದಾಳಿಗೂ ಕಾರಣವಾಗಬಲ್ಲದಾಗಿತ್ತು ಎಂದು ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬಾಲಾಕೋಟ್‌ ದಾಳಿ ಹಿನ್ನೆಲೆ:

2019ರ ಫೆ.14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್‌ ಉಗ್ರರು ನಡೆಸಿದ ದಾಳಿಗೆ ಭಾರತೀಯ ಸೇನೆಯ 40 ಯೋಧರು ಹತರಾಗಿದ್ದರು. ದಾಳಿಯಲ್ಲಿ ಪಾಕ್‌ ಮೂಲದ ಉಗ್ರ ಸಂಘಟನೆಗಳ ಕೈವಾಡ ಸ್ಪಷ್ಟವಾದ ಹಿನ್ನೆಲೆಯಲ್ಲಿ 2019ರ ಫೆ.26ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದಲ್ಲಿ ಉಗ್ರರ ನೆಲೆ ಇರುವ ಬಾಲಾಕೋಟ್‌ ಪ್ರದೇಶದ ಮೇಲೆ ಸರಣಿ ವೈಮಾನಿಕ ಬಾಂಬ್‌ ದಾಳಿ ನಡೆಸಿತ್ತು. ಇದರಲ್ಲಿ ನೂರಾರು ಉಗ್ರರು ಹತರಾಗಿದ್ದರು.

ಆದರೆ ದಾಳಿ ನಡೆಸಿ ಮರಳುವಾಗ ಭಾರತದ ಮಿಗ್‌ ವಿಮಾನವನ್ನು ಪಾಕ್‌ ಹೊಡೆದುರುಳಿಸಿತ್ತು. ಅದರೊಳಗಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಪಾಕ್‌ ಯೋಧರ ಕೈಗೆ ಸೆರೆ ಸಿಕ್ಕಿದ್ದರು. ಆದರೆ ಈ ವೇಳೆ ಭಾರತ ಹೇರಿದ ಒತ್ತಡದ ಪರಿಣಾಮ ಅಭಿನಂದನ್‌ ಅವರನ್ನು 3 ದಿನಗಳ ಬಳಿಕ ಸುರಕ್ಷಿತವಾಗಿ ಬಿಡುಗಡೆ ಮಾಡಿತ್ತು.

ಈ ದಾಳಿಯನ್ನು ಪಾಕಿಸ್ತಾನವೇ ಒಪ್ಪಿಕೊಂಡ ನಂತರ ಭಾರತದಲ್ಲಿರುವ ಸೋ ಕಾಲ್ಡ್ ‘ದೇಶಭಕ್ತರು’ ಇದರ ಬಗ್ಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇಷ್ಟು ದಿನ ಈ ದಾಳಿಯನ್ನು ಅನುಮಾನಿಸಿ ಸಾಕ್ಷ್ಯ ಕೇಳುತ್ತಿದ್ದ ಬುದ್ಧಿವಂತರು ಈಗ ಅದೆಲ್ಲಿ ಮಾಯವಾಗಿದ್ದಾರೋ??

error: Content is protected !!
Scroll to Top
%d bloggers like this: