ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆ | ಬಟ್ಟೆಯಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿ ಮನೆಗೆ ಬಾರದೇ ನಾಪತ್ತೆ

ಮಂಗಳೂರು : ಮದುವೆ ನಿಶ್ಚಯವಾಗಿದ್ದ ಯುವತಿ ಮೂಲತಃ ಕಾರವಾರ ನಿವಾಸಿ, ಮಂಗಳೂರಿನ ಗಾರ್ಮೆಂಟ್ಸ್ ಉದ್ಯೋಗಿ ಅಂಜಲಿ ಆನಂದು ಕೊಠರಕರ (24) ನಾಪತ್ತೆಯಾದ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಿಂಗಳ ಹಿಂದೆ ಕಾರವಾರದ ಮನೆಯಲ್ಲಿ ಇದ್ದು ಮಂಗಳೂರಿಗೆ ವಾಪಸಾಗಿದ್ದಳು.

 

ಅ. 3ರಂದು ಸಂಬಳ ಪಡೆದು ಮನೆಗೆ ಬರುವುದಾಗಿ ಫೋನ್ ಮಾಡಿ ತಿಳಿಸಿದ್ದಳು.

ಆದರೆ ಮನೆಗೆ ಬಂದಿಲ್ಲ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಗಾರ್ಮೆಂಟ್ಸ್‌ನಲ್ಲಿ ವಿಚಾರಿಸಿದಾಗ ಅ. 3ರಂದು ಊರಿಗೆ ಹೋಗುವುದಾಗಿ ಹೇಳಿ ಹೋಗಿರುವುದಾಗಿ ತಿಳಿಸಿದ್ದಾರೆ ಎಂದು ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಿತ್ತೂರು : ಹಿಟ್ ಆ್ಯಂಡ್ ರನ್ | ದ್ವಿಚಕ್ರ ವಾಹನ ಸವಾರ ಸಾವು ,ರಸ್ತೆಯಲ್ಲಿ ರಕ್ತದೋಕುಳಿ

Leave A Reply

Your email address will not be published.