ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಸಿದ್ಧವಾಗಿತ್ತು ‌ಮಾಸ್ಟರ್ ಪ್ಲಾನ್ | ಹತ್ಯೆಗೆ ಹೈಬ್ರಿಡ್ ಉಗ್ರರ ಬಳಕೆ, 700 ಭಯೋತ್ಪಾದಕರನ್ನು ವಶಕ್ಕೆ ಪಡೆದ ಭದ್ರತಾ ಪಡೆ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದ್ದು, ಈಗ ಇದಕ್ಕೆ ಬ್ರೇಕ್ ಬೀಳುವ ಕಾಲ ಸಮೀಪಿಸಿದೆ. ಹಿಂದುಗಳ ಹತ್ಯೆಗೆ ಸಂಚು ರೂಪಿಸಿದ್ದ ಭಯೋತ್ಪಾದಕರು ಇದೀಗ ಭದ್ರತಾಪಡೆಗಳ ಕಪಿಮುಷ್ಠಿಯಲ್ಲಿ ಬಂಧಿತರಾಗಿದ್ದಾರೆ.

ಹೌದು, ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಸಂಬಂಧಿಸಿದಂತೆ 700 ಮಂದಿ ಭಯೋತ್ಪಾದಕ ಸಹಾನುಭೂತಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ. ಐದು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಕನಿಷ್ಠ ಏಳು ಜನರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.

ಶ್ರೀನಗರ ಮೂಲದ ಸಿಖ್ಖರಾದ ಸುಪಿಂದರ್ ಕೌರ್ ಮತ್ತು ಜಮ್ಮುವಿನ ಹಿಂದೂ, ಚಾಂದ್ ಅವರು ಎರಡು ದಿನಗಳ ನಂತರ ಹತ್ಯೆಗೀಡಾಗಿದ್ದಾರೆ. ಲಷ್ಕರ್-ಎ-ತೊಯ್ಬಾ(Lashkar-e-Taiba)ದ ನೆರಳು ಸಂಘಟನೆ ಈ ಮೂರು ಜನರ ಸಾವಿಗೆ ಕಾರಣವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿಗಳು ಹೆಚ್ಚಿದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ.

ಉಗ್ರರ ಬಗ್ಗೆ ಅನುಕಂಪ ಹೊಂದಿರೋ 700 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಇವರ ಪೈಕಿ 500 ಮಂದಿ ನಿಷೇಧಿತ ಉಗ್ರ ಅಥವಾ ಧಾರ್ಮಿಕ ಸಂಘಟನೆಗಳ ಲಿಂಕ್ ಹೊಂದಿರುವ ಆರೋಪ ಹೊಂದಿದ್ದಾರೆ ಎಂದೂ ಕೂಡ ಪೊಲೀಸರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐಎಸ್‍ಐಎಸ್‍ (ISIS)ನ ಮ್ಯಾಗ್ಜೀನ್ ವಾಯ್ಸ್ ಆಫ್ ಹಿಂದ್ ಮತ್ತು ಬಟಿಂಡಿಯಲ್ಲಿ ಇತ್ತೀಚೆಗೆ ಸ್ಫೋಟಕ ಪತ್ತೆ ಪ್ರಕರಣ ಸಂಬಂಧ ಶ್ರೀನಗರ, ಬಾರಾಮುಲ್ಲಾ ಮತ್ತು ಅನಂತ್‍ನಾಗ್ ಜಿಲ್ಲೆಗಳಲ್ಲಿ ಈ ದಾಳಿ ನಡೆಸಲಾಗಿದೆ. ಎನ್‍ಐಎ ಅಧಿಕಾರಿಗಳಿಗೆ ಸಿಆರ್ ಪಿಎಫ್(CRPF) ಮತ್ತು ಜಮ್ಮು ಕಾಶ್ಮೀರ ಪೊಲೀಸರು ಸಾಥ್ ನೀಡಿದ್ದಾರೆ. ಈ ನಡುವೆ ಇವತ್ತು ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರು ಪೊಲೀಸರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ.

ಬೆಳ್ತಂಗಡಿ| ಅಕ್ರಮ ಮರಳುಗಾರಿಕೆ ವ್ಯಾಪಕ | ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆ

Leave A Reply

Your email address will not be published.