ಬಿಜೆಪಿ ಯಲ್ಲಿ ಬೂತ್ ಸಮಿತಿ ಅಧ್ಯಕ್ಷರಿಗೂ ಗೌರವದ ಸ್ಥಾನ-ನಳಿನ್ ಕುಮಾರ್
ಕಾಣಿಯೂರು : ಬಿಜೆಪಿಯಲ್ಲಿ ಕೇಂದ್ರದಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗಿರುವಷ್ಟೇ ಗೌರವ ಬೂತ್ ಸಮಿತಿ ಅಧ್ಯಕ್ಷರಿಗೂ ಇದೆ.ರಾಷ್ಟ್ರೀಯ ಅಧ್ಯಕ್ಷರ ಯೋಚನೆ ಎಲ್ಲೆಡೆ ಅನುಷ್ಠಾನ ಮಾಡಲಾಗಿದೆ.ಪಕ್ಷ ನಿಷ್ಟೆಯ ಕಾರ್ಯಕರ್ತರೇ ಬಿಜೆಪಿಯ ಆಸ್ತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಎಡಮಂಗಲ ಗ್ರಾಮದ ಪುಳಿಕುಕ್ಕು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಉದಯ ಕುಮಾರ್ ಡೆಕ್ಕಳ ಅವರ ಮನೆಗೆ ನಾಮಫಲಕವನ್ನು ಅಳವಡಿಸಿ ಮಾತನಾಡಿದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರು,ನಾಮ ಫಲಕ ಅಳವಡಿಸುವ ಉದ್ದೇಶ ಮತ್ತು ಬೂತ್ ಅಧ್ಯಕ್ಷರ ಗೌರವದ ಬಗ್ಗೆ ವಿವರಿಸಿದರು.
ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ, ಸುಬೋದ್ ಶೆಟ್ಟಿ ಮೇನಾಲ, ಬೆಳ್ಳಾರೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ವಸಂತ್ ನಡುಬೈಲು, ಪ್ರಧಾನ ಕಾರ್ಯದರ್ಶಿಗಳಾದ ಅನೂಪ್ ಆಳ್ವ,ಜಿ.ಪಂ.ಮಾಜಿ ಸದಸ್ಯ ಕಡಬ ಕೃಷ್ಣ ಶೆಟ್ಟಿ, ಭಾಸ್ಕರ ಗೌಡ, ಎಡಮಂಗಲ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಸುಳ್ಯ ನಗರಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ಲಡ್ಕ, ಎಡಮಂಗಲ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಹಾಗೂ ಪಂಚಾಯತ್ ಸದಸ್ಯ ರಾಮಣ್ಣ ಜಾಲ್ತಾರು, ಎಡಮಂಗಲ ಗ್ರಾ. ಪಂ. ಅಧ್ಯಕ್ಷೆ ಸುಮಾ ನೂಚಿಲ, ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭದಾ ಎಸ್. ರೈ, ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ರೇವತಿ, ಸದಸ್ಯರಾದ ನಾಗೇಶ್ ಮಾರೋಲಿ, ವನಿತಾ ಕೃತಿಮರ, ದುಷ್ಯಂತ, ಲೀಲಾವತಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಂದರ ಗೌಡ ದೋಳ್ತಿಲ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮಹೇಶ ಕುಮಾರ್ ಮೇನಾಲ, ಮೋಹನ್ ದಾಸ್ ರೈ ಬಲ್ಕಾಡಿ, ಈಶ್ವರ ಜಾಲ್ತಾರು, ಸುರೇಶ್ ಕಲ್ಲೆಂಬಿ ಕೈಮಲ, ವನಿತಾ ಪಾಲ್ಗಣಿ, ಸುಂದರ ದೋಳ್ತಿಲ, ಗಿರೀಶ್ ಅರ್ಗೆನಿ, ಪುರಂದರ ರೈ ಬಲ್ಕಾಡಿ, ನವೀನ್ ಕೂಟಾಜೆ, ಸ್ವರೂಪ್ ರೈ ಬಲ್ಕಾಡಿ, ಪ್ರವೀಣ್ ರೈ ಮರ್ದೂರ್, ಜಯರಾಮ್ ಬಳಕ್ಕಬೆ, ಕಾಂತು ದೇವಸ್ಯ, ಬಿಪಿನ್, ರಾಜ್ಯ ಮಹಿಳಾಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರಳ್ಯ, ಯೋಗೀಶ್ ಕಡಬ, ಕಮಲಾಕ್ಷಿ ಮರ್ದೂರ್ ಅಳಕ್ಕೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅನೂಪ್ ಆಳ್ವ ಸ್ವಾಗತಿಸಿ, ಶುಭದಾ ರೈ ವಂದಿಸಿದರು.