ಹೊಂಡದ ಬಳಿ ತೃಷೆ ತೀರಿಸಲೆಂದು ಬಂದ ಜಿಂಕೆಯನ್ನು ಕ್ಷಣಮಾತ್ರದಲ್ಲಿ ಬೇಟೆಯಾಡಿ ನೀರಿನೊಳಕ್ಕೆ ಎಳೆದುಕೊಂಡ ಹೆಬ್ಬಾವು | ಇದರ ಮಿಂಚಿನ ವೇಗದ ಬೇಟೆಯನ್ನು ನೋಡಿ ಬೆಚ್ಚಿ ಬೀಳೋದಂತೂ ಸತ್ಯ !!
ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ರೀತಿಯ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವು ಮನಸ್ಸು ಗೆಲ್ಲುವಂಥದ್ದು, ಇನ್ನೂ ಕೆಲವು ಬೆಚ್ಚಿಬೀಳಿಸುವಂತದ್ದು. ಮನಸ್ಸಿಗೆ ಮುದ ನೀಡುವಂತಹ ವಿಡಿಯೋಗಳು ಬಹಳಷ್ಟು ನೆಟ್ಟಿಗರ ಮನಸ್ಸು ಗೆಲ್ಲುತ್ತದೆ. ಆದರೆ ಇಲ್ಲೊಂದು ವೈರಲ್ ಆದ ಘಟನೆ ಬೆಚ್ಚಿಬೀಳಿಸುವಂತಿದೆ. ಹೆಬ್ಬಾವಿನ ರಣ ರೋಚಕವಾದ ಬೇಟೆ ಎದೆ ಝಲ್ಲೆನ್ನಿಸುವಂತಿದೆ.
ನೀರಿನ ಹೊಂಡದಲ್ಲಿ ಹೊಂಚು ಹಾಕಿ ಜಿಂಕೆಯನ್ನು ಬೇಟಿಯಾಡಿದ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾಧಿಕಾರಿ ಸುಶಾಂತ ನಂದಾ ಎಂಬುವವರು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿರುವಂತೆ ದಣಿವಾರಿಸಿಕೊಳ್ಳಲು ನೀರಿನ ಹೊಂಡದಲ್ಲಿ ನೀರು ಕುಡಿಯುತ್ತಿದ್ದ ಜಿಂಕೆಗಳಲ್ಲಿ ಒಂದನ್ನು ಮಿಂಚಿನ ವೇಗದಲ್ಲಿ ಬೃಹದಾಕಾರದ ಹೆಬ್ಬಾವು ಬೇಟೆಯಾಡಿ ನೀರಿನ ಒಳಗೆ ಎಳೆದುಕೊಳ್ಳುತ್ತದೆ.
ನಂದಾ ಅವರ ಪ್ರಕಾರ ವಿಡಿಯೋವನ್ನು ಮಹಾರಾಷ್ಟ್ರದ ಕೇಂದ್ರ ಚಂದಾ ವಿಭಾಗದಲ್ಲಿ ಸೆರೆಹಿಡಿಯಲಾಗಿದೆ. ವಿಡಿಯೋವನ್ನು ಶೇರ್ ಮಾಡಿ, ಜಂಪ್ ಮಾಡುವ ಮೂಲಕ ತನ್ನ ಬೇಟೆಯನ್ನು ಹೆಬ್ಬಾವೊಂದು ತನ್ನ ಹಲ್ಲುಗಳಿಂದ ಬಿಗಿಯಾಗಿ ಹಿಡಿಯಿತು. ಕೇವಲ 50 ಮಿಲಿಸೆಕೆಂಡ್ಸ್ಗಳಲ್ಲಿ ಹೆಬ್ಬಾವು ಬೇಟೆಯಾಡಿತು. ಆದರೆ ಓರ್ವ ವ್ಯಕ್ತಿ ಒಮ್ಮೆ ತನ್ನ ಕಣ್ಣನ್ನು ಮಿಟುಕಿಸಲು 200 ಮಿಲಿಸೆಕೆಂಡ್ಸ್ ತೆಗೆದುಕೊಳ್ಳುತ್ತಾನೆ ಎಂದು ವಿವರಿಸುವ ಮೂಲಕ ನಂದ ಅವರು ಹೆಬ್ಬಾವಿನ ಸಾಮರ್ಥ್ಯವನ್ನು ತಿಳಿಸಿದರು.
ಕಳೆದ ವಾರ ಈ ವಿಡಿಯೋ ಶೇರ್ ಆಗಿದ್ದು, ಈವರೆಗೆ ಸುಮಾರು 17 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಮೊದಲೇ ಮಂದಗತಿಯ ಪ್ರಾಣಿ ಎಂಬ ಹೆಸರನ್ನು ಹೊಂದಿರುವ ಹೆಬ್ಬಾವಿನ ಮಿಂಚಿನ ವೇಗದ ಬೇಟೆಯನ್ನು ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಂತೂ ನಿಜ.