ವಿಶ್ವ ಹಿಂದೂ ಪರಿಷತ್ ಬಜರಂಗದಳ
ಪುತ್ತೂರು ಪ್ರಖಂಡದ ಕೆಯ್ಯೂರು ಘಟಕ ವತಿಯಿಂದ ಅಂಬುಲೆನ್ಸ್ ಲೊಕಾರ್ಪಣೆ

ಬಜರಂಗದಳ ಪುತ್ತೂರು ಪ್ರಖಂಡ ಮಾಜಿ ಸಂಚಾಲಕರಾಗಿದ್ಧ ದಿ.ನಿತಿನ್ ನಿಡ್ಪಳ್ಳಿ ಇವರ ಸ್ಮರಣಾರ್ಥ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀ ದುರ್ಗಾ ಶಾಖೆ ಕೆಯ್ಯೂರು ವತಿಯಿಂದ ಅಂಬುಲೆನ್ಸ್ ಲೊಕಾರ್ಪಣೆ ಇಂದು ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ ಅವರು ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಮುಖ ಭಾಷಣ ಮಾಡಿದರು.
ಬಜರಂಗದಳ ಜಿಲ್ಲಾ ಸಂಚಾಲಕರಾದ ಭರತ್ ಕುಮ್ಡೇಲ್ ಅವರು ಬಜರಂಗದಳದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

 


ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್ , ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶಶಿಧರ್ ರಾವ್ ಬೊಳಿಕಳ್ಳ, ದಿ. ನಿತಿನ್ ನಿಡ್ಪಳ್ಳಿ ಅವರ ಮಾತೃಶ್ರೀಯವರಾದ ಜಲಜಾಕ್ಷಿ,ವಿಶ್ವ ಹಿಂದೂ ಪರಿಷತ್ ಕೆಯ್ಯೂರು ಘಟಕದ ಅಧ್ಯಕ್ಷರಾದ ಚರಣ್ ಸಣಂಗಲ,ಕೆಯ್ಯೂರು ಪಂಚಾಯತ ಅಧ್ಯಕ್ಷರಾದ ಜಯಂತಿ ಎಸ್ ಭಂಡಾರಿ ಉಪಸ್ಥಿತರಿದ್ದರು.


ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಕ್ ಸಸಿಹಿತ್ಲು ಕಾರ್ಯಕ್ರಮ ನಿರೂಪಣೆ ಮಾಡಿದರು ಹಾಗೂ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸತ್ಸಂಗ ಪ್ರಮುಖ್ ರವಿಕುಮಾರ್ ಕೈತ್ತಡ್ಕ ಸ್ವಾಗತಿಸಿ ,ಕೆಯ್ಯೂರು ಘಟಕದ ಮಾತೃಶಕ್ತಿ ಪ್ರಮುಖರಾದ ಚಂದ್ರಾವತಿ ಧನ್ಯವಾದ ಸಮರ್ಪಣೆಗೈದರು.

Leave A Reply

Your email address will not be published.