ಮಗನ ಕಣ್ಣೆದುರೇ ಹಳ್ಳದಲ್ಲಿ ಕೊಚ್ಚಿಕೊಂಡೋದ ತಾಯಿ!!

Share the Article

ಶಿವಮೋಗ್ಗ : ಮಗನ ಕಣ್ಣೆದುರೆ ತಾಯಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಘಟನೆ ಶಿವಮೋಗ್ಗ ಜಿಲ್ಲೆಯ ತೀರ್ಥಹಳ್ಳಿ ಶಿರುಪತಿ ಗ್ರಾಮದ ಬಳಿ ನಡೆದಿದೆ.

ಜಸ್ಟಿನ್ ಮಚಾಡೋ ಮೃತಪಟ್ಡ ಮಹಿಳೆಯಾಗಿದ್ದು,ನಿನ್ನೆ ಸಂಜೆ ದಿನಸಿ ತರಲು ಮಗನ ಜೊತೆ ಹಳ್ಳದಾಟಿದಾಗ ಈ ಘಟನೆ ನಡೆದಿದೆ.

ದಿನಸಿ ತರಲು ಹಳ್ಳದಾಟಿದಾಗ ನೀರಿನ ಹರಿವು ಕಡಿಮೆ ಇತ್ತು.ಆದರೆ ವಾಪಸ್ಸು ಹಳ್ಳ ದಾಟುವಾಗ ನೀರಿನ ಹರಿವು ಹೆಚ್ಚಾಗಿತ್ತು.ಮಗನನ್ನು ದಡದಲ್ಲೆ ಬಿಟ್ಟು ನೀರಿನ ಹರಿವು ಅರಿಳಿದುಕೊಳ್ಳಲು ಹಳ್ಳಕ್ಕೆ ಇಳಿದಾಗ ಕೈಲಿದ್ದ ಮೊಬೈಲ್ ಬಿದ್ದಿದೆ. ಆಗ ಜಸ್ಟಿನ್ ಆಯತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕದೂರದರ ಬಳಿ ಹಳ್ಳದಲ್ಲಿ ಶವ ಪತ್ತೆಯಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply