ನೀರಿನ ಬಾಟಲಿನ ಕುತ್ತಿಗೆಯೊಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯ ಲಿಂಗ | ಎರಡು ತಿಂಗಳು ಕಳೆದ ನಂತರ ವೈದ್ಯರ ಬಳಿ ತೆರಳಿದ !!

ಬಾಟಲಿಯೊಳಗೆ ವ್ಯಕ್ತಿಯ ಖಾಸಗಿ ಅಂಗ ಸಿಕ್ಕಿಹಾಕಿಕೊಂಡು, ಎರಡು ತಿಂಗಳು ಯಾರಿಗೂ ಹೇಳಲಾಗದೆ ಫಜೀತಿ, ನೋವು ಅನುಭವಿಸಿದ ವಿಚಿತ್ರ ಘಟನೆ ವರದಿಯಾಗಿದೆ.

ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬನು ತನ್ನ ಲೈಂಗಿಕ ಆನಂದಕ್ಕಾಗಿ ತನ್ನ ಶಿಶ್ನವನ್ನು ಬಾಟಲಿಯ ಕುತ್ತಿಗೆಗೆ ತುರುಕಿದ್ದಾನೆ. ಹಾಗೆ ತೂರಿಸಿ ಅದೇನೋ ಮಜಾ ಮಾಡಲು ಹೋದವನ ಶಿಶ್ನ ಬಾಟಲಿಯ ಕುತ್ತಿಗೆಗೆ ಸಿಕ್ಕಿಕೊಂಡಿದೆ. ಶಿಶ್ನ ಅಲ್ಲೇ ಬಾಕಿಯಾಗಿ ಕೊನೆಗೆ ಜೀವ ಕುತ್ತಿಗೆಯವರೆಗೆ ಬಂದಿತ್ತು. ಸಾವಿನಂಚಿಗೆ ತಲುಪಿ ಕೊನೆಗೂ ಆತ ಬದುಕುಳಿದಿದ್ದಾನೆ. ಇನ್ನೇನು ಕಳಚಿ ಬೀಳಲಿದ್ದ ಗಂಡಸ್ತನ ಜಸ್ಟ್ ಸೇಫ್ ಆಗಿದೆ.

ಲೈಂಗಿಕವಾಗಿ ಅತೃಪ್ತವಾಗಿರುವ ಆ ವ್ಯಕ್ತಿ ಆನಂದಕ್ಕಾಗಿ ಆನಂದಕ್ಕಾಗಿ ಎನೋನೋ ಮಾಡಲು ಹೋಗಿ ಕಷ್ಟದ ಪರಿಸ್ಥಿತಿಗೆ ಸಿಲುಕಿರುವ ಅನೇಕ ಘಟನೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ನೇಪಾಲದ 45 ವರ್ಷದ ವ್ಯಕ್ತಿ ನೀರು ಕುಡಿಯಲು ಬಳಸುವ ಪ್ಲಾಸ್ಟಿಕ್ ಬಾಟಲಿ ಬಳಸಿಕೊಂಡಿದ್ದಾನೆ. ಆ ಬಾಟಲಿಯ ಕುತ್ತಿಗೆಯ ಭಾಗವನ್ನು ಕಟ್ ಮಾಡಿಕೊಂಡು ಅದಕ್ಕೆ ಶಿಶ್ನವನ್ನು ತೂರಿಸಿದ್ದಾನೆ. ಪರಿಣಾಮ ಶಿಶ್ನವು ಅದರಲ್ಲೇ ಬಾಕಿಯಾಗಿದೆ. ಲೈಂಗಿಕ ಬಯಕೆ ಈಡೇರಿಸುವ ಆಸೆಯಿಂದ ಹೀಗೆ ಸಂಕಷ್ಟದಲ್ಲಿ ಸಿಲುಕಿದ ವ್ಯಕ್ತಿ ಎರಡು ತಿಂಗಳ ಕಾಲ ನಾನಾ ಪ್ರಯತ್ನ ಮಾಡಿದರು ಶಿಶ್ನವನ್ನು ಅದರಿಂದ ಹೊರತೆಗೆಯಲು ಸಾಧ್ಯವಾಗಿಲ್ಲ. ಕೊನೆಗೆ ವೈದ್ಯರನ್ನು ಕಾಣಬೇಕಾದ ಅನಿವಾರ್ಯತೆ ಆತನಿಗೆ ಎದುರಾಗಿದ್ದು, ಆ ವ್ಯಕ್ತಿ ಅವಸ್ಥೆಯನ್ನು ನೋಡಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ಬಂದಿದೆ. ಆತನ ಶಿಶ್ನಕ್ಕೆ ರಕ್ತ ಪೂರೈಕೆ ಕಡಿತಗೊಳಿಸಿದ್ದರಿಂದ ಮತ್ತು ಬಾಟಲಿಯೊಳಗಿರುವುದರಿಂದ ಕೊಳೆಯಲು ಕಾರಭವಾಗಬಹುದು ಎಂಬ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಆದರೆ 45 ವರ್ಷದ ವ್ಯಕ್ತಿ ಯಾಕಾಗಿ ಈ ರೀತಿ ಮಾಡಿದ್ದಾನೆ ಎಂಬುದಕ್ಕೆ ಕಾರಣವನ್ನು ತಿಳಿಸದೆ ಸುಮ್ಮನಾಗಿದ್ದಾನಂತೆ.

ನೇಪಾಳದ ಕೊಯಿರಾಲ ಆರೋಗ್ಯ ವಿಜ್ನಾನ ಸಂಸ್ಥೆ ಹೇಳಿದಂತೆ ರಕ್ತದ ಹರಿವಿನ ಕೊರತೆಯಿಂದ ವ್ಯಕ್ತಿ ಶಿಶ್ನವು ವಿಪರೀತವಾಗಿ ಊದಿಕೊಂಡಿತ್ತು. ಮಾತ್ರವಲ್ಲದೆ ರೋಗಿ ನೋವಿನಿಂದ ಬಳಲುತ್ತಿದ್ದನು ಎಂಬುದು ವೈದ್ಯರ ಬಳಿ ಹೇಳಿಕೊಂಡಿದ್ದನು. ಪರೀಕ್ಷೆ ನಡೆಸಿದ ಬಳಿಕ ಜೀವಹಾನಿಯಿದೆ ಎಂಬುದನ್ನು ಅರಿತು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಮತ್ತು ವ್ಯಕ್ತಿಯನ್ನು ಪ್ರಾಣಪಾಯದಿಂದ ಕಾಪಾಡಲಾಗಿದೆ. ಮಾನಸಿಕ ಅಸ್ವಸ್ಥತೆ ಮತ್ತು ಲೈಂಗಿಕ ಪ್ರಚೋದನೆ ಹೆಚ್ಚಿಸುವ ಪ್ರಯತ್ನದಿಂದಾಗಿ ಅನೇಕರು ಇಂತಹ ಸಮಸ್ಯೆ ಬಲಿಯಾಗಿದ್ದಾರೆ. ಬಾಟಲಿ, ವೈರ್, ಮೊಬೈಲ್ ಕೇಬಲ್, ಪೈಪ್ ಹೀಗೆ ನಾನಾ ವಸ್ತುಗಳನ್ನು ಬಳಸಿ ಸಮಸ್ಯೆಗೆ ಸಿಲುಕಿ ಹಾಕಿಕೊಂಡವರ ಪ್ರಕರಣಗಳ ಬೆಳಕಿಗೆ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಿಂದೆ 2016 ರಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದ್ದು ಅದರಲ್ಲಿ ಬಾಟಲಿಯ ಒಳಗೆ ತುರುಕಿಸಿಕೊಂಡಿದ್ದ ವ್ಯಕ್ತಿಯ ಶಿಶ್ನ ರಕ್ತಸಂಚಾರವಾಗದೆ ಕಪ್ಪಾಗಿ ಸತ್ತುಬಿದ್ದಿತ್ತು. ಅನಂತರ ಅದನ್ನು ತುಂಡರಿಸಿ ತೆಗೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅಸಹಜ ಸೆಕ್ಸ್ ಮಾಡಲು ಹೋಗಿ, ಸಹಜ ಸೆಕ್ಸ್ ಮಾಡಲೂ ಆಗದ ಹಾಗೆ ಮಾಡಿಕೊಂಡಿದ್ದ ಆ ಆಸಾಮಿ.

Leave A Reply

Your email address will not be published.