ಅಜ್ಜನ ಪಾಲಿಗೆ ಸೂಪರ್ ಹೀರೋಗಳಾದ ಮೂವರು ಯುವಕರ ತಂಡ | ಬೆಂಕಿಯ ಕೆನ್ನಾಲಿಗೆಯಿಂದ ಮುದಿ ಜೀವವನ್ನು ಕಾಪಾಡಿದ ಯುವಕರಿಗೆ ಪ್ರಶಂಸೆಗಳ ಸುರಿಮಳೆ

Share the Article

ಬೆಂಕಿ ಎಂದ ಕೂಡಲೇ ದೂರ ಸರಿಯೋ ಜನರ ನಡುವೆ, ಇಲ್ಲೊಂದು ಯುವಕರ ತಂಡ ಜೀವ ಭಯ ಇಲ್ಲದೆ ವೃದ್ಧರೊಬ್ಬರ ಪಾಲಿಗೆ ಹೀರೋಗಳಂತೆ ಬಂದು ಬೆಂಕಿಯಿಂದ ರಕ್ಷಿಸಿದ ಘಟನೆ ನಡೆದಿದೆ.

ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ವೃದ್ಧರೊಬ್ಬರು ಬೆಂಕಿಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು,ನೆರವಿಗಾಗಿ ಕೇಳುತ್ತಿದ್ದರು. ಈ ವೇಳೆ ಮೂವರು ಸ್ನೇಹಿತರು ಸೂಪರ್ ಹೀರೋಗಳಂತೆ ಬಂದು ವೃದ್ಧನ ಪ್ರಾಣವನ್ನು ರಕ್ಷಿಸಿದ್ದಾರೆ.

ಕೆಳಗಿದ್ದ ಜನರು ಆತಂಕದಲ್ಲಿ ಬೊಬ್ಬೆ ಹೊಡೆಯುತ್ತಿದ್ದರು. ದೃಶ್ಯವನ್ನು ನೋಡಿದ ಮೂವರು ಸ್ನೇಹಿತರು ತಕ್ಷಣ ಕಟ್ಟಡ ಮೇಲೆ ಹೋಗಿ ಸಾಹಸಮಯವಾಗಿ ಬೆಂಕಿ ಬಿದ್ದ ಕಟ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಜ್ಜನನ್ನು ಯುವಕರು ಬಂದು ರಕ್ಷಣೆ ಮಾಡಿದ್ದಾರೆ. ದಟ್ಟ ಹೊಗೆ ಇದ್ದ ಜಾಗದಲ್ಲಿ ಹೀರೋಗಳಂತೆ ವೃದ್ಧನನ್ನು ಕಾಪಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ.

Leave A Reply