ಎಲ್ಲೂ ಕಂಡು ಕೇಳರಿಯದ ರೀತಿಯಲ್ಲಿ ಬಂತು ಮದುವೆ ದಿಬ್ಬಣ | ಕಾರಲ್ಲ, ಬುಲೆಟ್ ಬೈಕ್ ಅಲ್ಲ, ಕುದುರೆಯೂ ಅಲ್ಲ ಜೆಸಿಬಿಯಲ್ಲಿ ಬಂದ ನವ ವಧು-ವರರ ದಿಬ್ಬಣ !!

ಪ್ರತಿಯೊಂದು ವಧು-ವರರಿಗೂ ತಮ್ಮ ಮದುವೆ ಡಿಫರೆಂಟ್ ಆಗಿ ಮಿಂಚ್ ಬೇಕು ಎಂಬ ಕನಸುಗಳಿರುತ್ತೆ. ಆದ್ರೆ ಇಲ್ಲೊಂದು ಜೋಡಿಯ ಡಿಫರೆಂಟ್ ಎಂಟ್ರಿ ಮಾತ್ರ ಸಕ್ಕತ್ ಮಿಂಚಿಂಗೋ ಮಿಂಚಿಂಗ್.

ಹೌದು. ಈ ನವಜೋಡಿ ಕಡಲ ದಾಟಿ ಬರ್ಲಿಲ್ಲ, ಕುದುರೆ ಏರಿ ಬರ್ಲಿಲ್ಲ .ಬದಲಿಗೆ ಈ ವಿವಾಹದ ಈ ಡಿಫರೆಂಟ್ ಎಂಟ್ರಿ ಕೊಟ್ಟ ವಿಶಿಷ್ಟ ಜೋಡಿ ಕಾರಿಲ್ಲ ಕುದುರೆ ಇಲ್ಲ. ಜೆಸಿಬಿಯೇ ಎಲ್ಲಾ ಎಂಬಂತೆ ಜೆಸಿಬಿ ಹತ್ತಿದ ಜೋಡಿ.

ಜೆಸಿಬಿ ಗೆ ಫುಲ್ ಅಲಂಕಾರ ಮಾಡಿ ರಸ್ತೆಗಿಳಿದ ಜೋಡಿ ಕಂಡು ಜನ ಅಚ್ಚರಿ ಪಟ್ಟಿದ್ದಾರೆ.ಅಂತೂ ಈ ಸೀನ್ ಅನ್ನು ನೋಡಿ ಜನ ನಿಬ್ಬೆರಗಾಗಿ ಹುಬ್ಬರಿಸಿದ್ರು. ಅದ್ಯಾಕೆ ಅಂತ ಈ ವಿಡಿಯೋದಲ್ಲಿ ನೀವೇ ನೋಡಿ.

ಪಾಕಿಸ್ತಾನದ ಹುಂಜ ಕಣಿವೆಯಲ್ಲಿ ಡಿಫರೆಂಟ್ ಆಗಿ ಗಮನ ಸೆಳೆದ ವಧು ವರನ ದಿಬ್ಬಣವಿದಾಗಿದ್ದು. ಯಾವುದೇ ದೊಡ್ಡ ವಾಹನಗಳ ಮೊರೆ ಹೋಗದೆ ಜೆಸಿಬಿ ಏರಿ ದಾರಿ ಉದ್ದಕ್ಕೂ ಜನರಿಗೆ ಕೈ ಮುಗಿದು ಬಂದಿದ್ದಾರೆ.

Leave A Reply

Your email address will not be published.