ಇನ್ನು ಮುಂದೆ ಭಾರತೀಯ ವಾಹನಗಳಲ್ಲಿ ಕೇಳಿಬರಲಿವೆಯಂತೆ ಸಂಗೀತ ವಾದ್ಯಗಳು ?! | ವಾಹನಗಳ ಹಾರ್ನ್ ಗೆ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಲಾಗುವುದು- ಕೇಂದ್ರ ಸಚಿವ ನಿತಿನ್ ಗಡ್ಕರಿ

ನಾಸಿಕ್ : ಭಾರತೀಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ವಾಹನಗಳ ಹಾರ್ನ್ ಗೆ ಸಂಗೀತ ವಾದ್ಯಗಳ ಶಬ್ದವನ್ನು ಅಳವಡಿಸಲು ನಿರ್ಧಾರ ಕೈಗೊಂಡಿದೆ.

ವಾಹನಗಳ ಹಾರ್ನ್ ಗೆ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ಅಳವಡಿಸಿಕೊಳ್ಳಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಸಚಿವರು ವಾಹನಗಳ ಹಾರ್ನ್ ಗೆ ಕೇವಲ ಭಾರತೀಯ ಸಂಗೀತ ವಾದ್ಯಗಳ ಶಬ್ದ ಅಳವಡಿಸಿಕೊಳ್ಳಲು ಶೀಘ್ರವೇ ಕಾನೂನು ತರಲಾಗುತ್ತದೆ. ಕೊಳಲು, ತಬಲಾ, ವಯೋಲಿನ್, ಹಾರ್ಮೋನಿಯಂ, ಹಾರ್ಮೋನಿಕಾ ಮುಂತಾದ ಭಾರತೀಯ ಸಂಗೀತ ಸಾಧನಗಳನ್ನು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಆಂಬುಲೆನ್ಸ್,ಪೊಲೀಸ್ ವಾಹನಗಳು ಬಳಸುವ ಸೈರನ್ ಗಳ ಬಗ್ಗೆಯೂ ಅಧ್ಯಯನ ಮಾಡಲಾಗಿದ್ದು, ಈಗಿರುವ ಶಬ್ದಕ್ಕೆ ಬದಲಾಗಿ ಆಲ್ ಇಂಡಿಯಾ ರೇಡಿಯೋದಲ್ಲಿ ಬರುವ ಟ್ಯೂನ್ ಅನ್ನು ಬಳಸುವ ಬಗ್ಗೆ ಚಿಂತನೆಯೂ ನಡೆದಿದೆ. ಜೊತೆಗೆ ಪೊಲೀಸರು ಮತ್ತು ರಾಜಕೀಯ ವ್ಯಕ್ತಿಗಳು ಬಳಸುವ ಕಾರುಗಳ ಮೇಲೆ ಅಳವಡಿಸುವ ಕೆಂಪು ದೀಪವನ್ನು ಕೂಡಾ ತೆಗೆದುಹಾಕಲಾಗುತ್ತದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.