ಕೆದಂಬಾಡಿ : ಆಕಸ್ಮಿಕ ವಿದ್ಯುತ್ ಅವಘಡ : ಕೃಷಿಕ ಮೃತ್ಯು

ಪುತ್ತೂರು: ಕೆದಂಬಾಡಿ ಹೆಂಡತಿ ಮನೆಯ ತೋಟದಲ್ಲಿ ಕೃಷಿ ಚಟುವಟಿಕೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಅವಘಡದಿಂದ ಕರ್ನೂರು ಭಾವ ನಿವಾಸಿ ಕೃಷಿಕ ಧನಂಜಯ ರೈ ಅವರು ಮೃತಪಟ್ಟಿದ್ದಾರೆ.

 

ಧನಂಜಯ ರೈ

ಕುದ್ಕಾಡಿ ದಿ.ಸೋಮಪ್ಪ ರೈ ಅವರ ಪುತ್ರ ಧನಂಜಯ ರೈ ಅವರು ಕೆದಂಬಾಡಿ ಬೊಳೋಡಿಯಲ್ಲಿರುವ ಪತ್ನಿ ಅಮಿತಾ ಅವರ ಮನೆಯ ತೋಟದಲ್ಲಿ ಕೃಷಿ ಚಟುವಟಿಕೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಅವಘಡವಾಗಿದೆ ಎನ್ನಲಾಗಿದೆ.

ಅಸ್ವಸ್ಥಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದು ಕೊಂಡು ಬರಲಾಯಿತ್ತಾದರೂ ಆಗಲೇ ಧನಂಜಯ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಅಮಿತಾ ಪುತ್ರಿಯರಾದ ದೀನಾ ಮತ್ತು ಧ್ಯಾನ ಅವರನ್ನು ಅಗಲಿದ್ದಾರೆ.

Leave A Reply

Your email address will not be published.