ಕೋಳಿ ಅಂಕದಲ್ಲಿ ಕ್ಷುಲ್ಲಕ‌ ವಿಚಾರಕ್ಕೆ ಚಕಮಕಿ | ಆರು ಮಂದಿಗೆ ಚೂರಿ ಇರಿತ,ಮೂವರ ಸ್ಥಿತಿ ಗಂಭೀರ

Share the Article

ಕೋಳಿ ಅಂಕದಲ್ಲಿ ಕ್ಷುಲ್ಲಕ ವಿಚಾರದಲ್ಲಿ ಉಂಟಾದ ಮಾತಿನಚಕಮಕಿಯಿಂದಾಗಿ ಯುವಕನೋರ್ವ ಆರು ಮಂದಿಗೆ ಚೂರಿಯಿಂದ ಇರಿದ ಘಟನೆ ರವಿವಾರ ರಾತ್ರಿ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ನಡೆದಿದೆ.

ಬಂಬ್ರಾಣ ಸಮೀಪದ ಅಂಡಿತ್ತಡ್ಕ ಎಂಬಲ್ಲಿ ಈ ಘಟನೆ ನಡೆದಿದ್ದು, ಬಂಬ್ರಾಣದ ಕಿರಣ್ (29), ಕುದ್ರೆಪ್ಪಾಡಿಯ ಗುರುರಾಜ್(23), ನವೀನ್(22), ಧೀರಜ್ (21), ಪ್ರವೀಣ್ (21) ಮತ್ತು ಚರಣ್ (23) ಚೂರಿ ಇರಿತಕ್ಕೊಳಗಾದವರು. ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply