ಕೊಳ್ತಿಗೆ ಅನ್ಯಕೋಮಿನ ಯುವಕನ ಮನೆಯಲ್ಲಿ ಹಿಂದು ಯುವತಿ ಪತ್ತೆ ಪ್ರಕರಣ | ಆತ್ಮಹತ್ಯೆಗೆ ಯತ್ನಿಸಿದ ಯುವತಿ,ಪುತ್ತೂರು ಆಸ್ಪತ್ರೆಗೆ ದಾಖಲು

Share the Article

ಪುತ್ತೂರು ತಾಲೂಕಿನ ಕೊಳ್ತಿಗೆ ಕುಂಟಿಕಾನ ಎಂಬಲ್ಲಿ ಸಿದ್ದೀಕ್ ಎಂಬಾತ ಹಿಂದು ಯುವತಿಯನ್ನು ಅಪಹರಿಸಿ ಮನೆಯಲ್ಲಿ ಇರಿಸಿಕೊಂಡಿದ್ದ ಎಂಬ ಘಟನೆಗೆ ತಿರುವು ಪಡೆದುಕೊಳ್ಳುತ್ತಿದ್ದು,ಯುವತಿ ಆತ್ಮಹತ್ಯೆ ಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.

ಫೋನ್ ಮೂಲಕ ಪರಿಚಯವಾದ ಕಾಸರಗೋಡು ಜಿಲ್ಲೆಯ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ದೇಲಂಪಾಡಿಯ ದಲಿತ ಸಮುದಾಯದ ಯುವತಿಯನ್ನು ಆಕೆಯ ಮನೆಯಿಂದ ಕಾರಿನಲ್ಲಿ ಮನೆಗೆ ಕರೆದುಕೊಂಡು ಬಂದಿದ್ದ ಸಿದ್ದಿಕ್ ,ಯಾರಿಗಾದರೂ ತಿಳಿದರೆ ಸಮಸ್ಯೆಯಾಗಬಹುದೆಂದು ಆಕೆಯನ್ನು ಜಾಲ್ಸೂರಿಗೆ ಬಿಟ್ಟು ಬಂದ ಬಳಿಕ ಸ್ಥಳೀಯರಿಗೆ ಗೊತ್ತಾಗಿ ಆಕೆ ನಡೆದ ವಿಷಯ ತಿಳಿಸಿದ್ದಳು.ಬಳಿಕ ಬೆಳ್ಳಾರೆ ಪೊಲೀಸರು ಯುವತಿಯ ಮನೆಯವರನ್ನು ಸಂಪರ್ಕಿಸಿ,ಕೇರಳದ ಆದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದರಿಂದ ಯುವತಿ ಹಾಗೂ ಯುವಕನನ್ನು ಆದೂರು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದರು.

ಅಲ್ಲಿಂದ ನ್ಯಾಯಾಲಯಕ್ಕೆ ಇಬ್ಬರನ್ನೂ ಹಾಜರುಪಡಿಸಿದಾಗ ಯುವತಿಯ ಇಚ್ಚೆಯಂತೆಯೇ ಆಕೆಯನ್ನು ಯುವಕನ ಜತೆ ಕಳಿಸಲು ನ್ಯಾಯಾಲಯ ಆದೇಶ ನೀಡಿತ್ತು.ಬಳಿಕ ನ್ಯಾಯಾಲಯದ ಹೊರಗಡೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದರು.

ಆ ಯುವತಿ ಇಂದು ಬಸೀರಡ್ಕ ಬಸ್ ನಿಲ್ದಾಣದಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು,ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave A Reply