ನಾಳೆಯಿಂದ ತನ್ನ ಎಟಿಎಂ ಸೇವೆ ನಿಲ್ಲಿಸಲಿದೆ ಈ ಬ್ಯಾಂಕ್ |ಇದಕ್ಕೆ ಕಾರಣವಾದರೂ ಏನು??
ಈಗಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಟೆಕ್ನಾಲಜಿಗೆ ಅವಲಂಬಿತರಾಗುತ್ತಾರೆ. ಎಲ್ಲಿ? ಹೇಗೆ? ಸಮಯ ಉಳಿತಾಯ ಮಾಡುವುದು ಎಂದು ನೋಡುತ್ತಿರುವ ಕಾಲಘಟ್ಟವಾಗಿದೆ.
ಬ್ಯಾಂಕ್ ಗ್ರಾಹಕರಿಗೆ ಎಟಿಎಂ ಕೇಂದ್ರಗಳು ಅತ್ಯಾಪ್ತ ಸ್ನೇಹಿತನಾಗಿ ಯಾವುದೋ ಕಾಲವಾಗಿದೆ. ಅದಿಲ್ಲದೆ ಬ್ಯಾಂಕ್ ವಹಿವಾಟು ಕಷ್ಟ ಎನ್ನುವಂತಾಗಿದೆ ಪರಿಸ್ಥಿತಿ. ಹೀಗಿರುವಾಗ ಒಂದು ಬ್ಯಾಂಕ್ ತನ್ನ ಎಟಿಎಂ ಯಂತ್ರಗಳ ಸೇವೆಯನ್ನು ಬಂದ್ ಮಾಡಲು ಹೊರಟಿದೆ.
ಹೌದು ನಾಳೆ ಅಕ್ಟೋಬರ್ 1ರಿಂದ ಸೂರ್ಯೋದಯ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ (Suryoday Small Finance Bank) ತನ್ನ ಎಟಿಎಂ ಯಂತ್ರಗಳು (ATMs) ಮೂಲಕ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ಗಳ ವಹಿವಾಟನ್ನು ಸ್ಥಗಿತಗೊಳಿಸಲಿದೆ.
ಕೋವಿಡ್ 19 ಅವಕೃಪೆಯಿಂದಾಗಿ 2021 ಜೂನ್ 30 ರ ತ್ರೈಮಾಸಿಕ ವರದಿಯಲ್ಲಿ 48 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದು,ಅದಕ್ಕೂ ಮುನ್ನ ವರ್ಷದ ಹಿಂದೆ 27 ಕೋಟಿ ರೂಪಾಯಿ ನಷ್ಟಕ್ಕೊಳಗಾಗಿತ್ತು.
ಸೂರ್ಯೋದಯ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ (SSF Bank) ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಆಗಿದ್ದು 2017ರಿಂದ ಸೇವೆ ಒದಗಸುತ್ತಿದೆ. 13 ರಾಜ್ಯಗಳಲ್ಲಿ ಇದರ ಕಾರ್ಯಚಟುವಟಿಕೆ ವಿಸ್ತರಿಸಿದೆ. 555 ಬ್ಯಾಂಕ್ ಬ್ರಾಂಚ್ಗಳು ಸೇವೆ ಒದಗಿಸುತ್ತಿವೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಒಡಿಶಾ ರಾಜ್ಯಗಳಲ್ಲಿ ಹೆಚ್ಚಾಗಿ ಕಾರ್ಯಗತವಾಗಿದೆ.
ಕಾರ್ಯಕಾರಿ ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಆದರೂ SSF Bank ಬ್ಯಾಂಕ್ ಗ್ರಾಹಕರು ತಮ್ಮ ATM/Debit card ಗಳನ್ನು ಇತರೆ ಬ್ಯಾಂಕ್ಗಳ ATM ಕೇಂದ್ರಗಳಲ್ಲಿ ಬಳಕೆ ಮಾಡಬಹುದು ಎಂದು ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಆದರೂ SSF ಬ್ಯಾಂಕ್ನ ಇತರೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಅಬಾಧಿತವಾಗಿ ಮುಂದುವರಿಯಲಿದೆ.
SSF Bank ಬ್ಯಾಂಕ್ ಕಳೆದ ತಿಂಗಳು ತನ್ನ ಷೇರುದಾರರ ಸಾಮಾನ್ಯ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸುವಾಗ ಭವಿಷ್ಯದಲ್ಲಿ ತನ್ನ ಗ್ರಾಹಕರಿಗೆ ಇನ್ನೂ ಹೆಚ್ಚಿನ ಮೌಲ್ಯಯುತ ಸೇವೆ ಒದಗಿಸಿವಂತಾಗಲು ಈ ನಿರ್ಣಾಯ ಅನಿವಾರ್ಯ ಎಂದು ತಿಳಿಸಿತ್ತು.