ಪ್ರವಾಹದ ಪರಿಸ್ಥಿತಿಯಲ್ಲಿ ಅಲ್ಯೂಮಿನಿಯಂ ಪಾತ್ರೆಯಲ್ಲಿ ಮಗುವನ್ನು ಇಟ್ಟು ಪೋಲಿಯೋ ಲಸಿಕೆ ಕೊಡಿಸಿದ ಪೋಷಕರು|ವೈರಲ್ ಆಗಿದೆ ಈ ಚಿತ್ರ|
ನವದೆಹಲಿ: ಜೀವನದಲ್ಲಿ ಮನುಷ್ಯ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಅದರಲ್ಲೂ ಪ್ರಕೃತಿ ವಿಕೋಪವಾದಾಗ ಪ್ರತಿಯೊಬ್ಬನ ಜೀವನ ಅಸ್ಥವಸ್ಥವಾಗುತ್ತದೆ. ಪ್ರಕೃತಿಗೆ ಬಡವ ಬಲ್ಲಿದ ಎಂಬ ಭೇದ ನೋಡದೆ ನೋವು ಇಬ್ಬರನ್ನು ಸಮಾನವಾಗಿ ಕಾಡುತ್ತದೆ.ಇಂತಹ ಪರಿಸ್ಥಿತಿಗೆ ಭೀಕರ ಪ್ರವಾಹಕ್ಕೆ ಒಳಗಾದ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಸೇರಿ ಹಲವು ರಾಜ್ಯಗಳು ಇದೀಗ ಸಾಕ್ಷಿಯಾಗಿವೆ. ಈ ಪ್ರವಾಹ ಪರಿಸ್ಥಿತಿಯಲ್ಲಿಯೇ, ಗಂಗಾ ನದಿಯ ತಟದಲ್ಲಿ ಪುಟ್ಟ ಮಗುವನ್ನು ಅಲ್ಯುಮಿನಿಯಂ ಪಾತ್ರೆಯಲ್ಲಿಟ್ಟು ರಕ್ಷಿಸಿ ಪೋಲಿಯೋ ಲಸಿಕೆ ನೀಡಲಾಗಿದೆ. ಈ ಘಟನೆ ಪ್ರಾಕೃತಿಕ ವಿಕೋಪದ ನಡುವೆಯೂ, ಮನುಷ್ಯನ ಇಚ್ಛಾಶಕ್ತಿಯ ಅನಾವರಣ ಆಗಿದೆ ಹೀಗೆ ಮಗುವಿಗೆ ಪೋಲಿಯೋ ಲಸಿಕೆ ನೀಡಿದ ಆರೋಗ್ಯ ಕಾರ್ಯಕರ್ತರ ಈ ಕಾರ್ಯಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.ಧನಾತ್ಮಕ ಚಿಂತನೆಯು ಯಾವುದೇ ವ್ಯಕ್ತಿಗೆ ಹೇಗೆ ಅಮೃತದಂತೆ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಘಟನೆಯೊಂದು ತಾಜಾ ಉದಾಹರಣೆ.
ಭಾರೀ ಮಳೆಯಿಂದಾಗಿ ಈ ವರ್ಷ ಉತ್ತರಪ್ರದೇಶ,ಬಿಹಾರ, ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ(Flood Situation)ಪರಿಸ್ಥಿತಿ ಉಂಟಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಅನೇಕರು ಧೈರ್ಯದಿಂದ ಎದುರಿಸಿದ್ದಾರೆ.ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿಯೇ ಜನಿಸಿದ ಮಗುವಿನ ಆರೈಕೆ ಮಾಡಲು ಅದರ ಪೋಷಕರು ತುಂಬಾ ಕಷ್ಟಪಟ್ಟಿದ್ದಾರೆ.ಪುಟ್ಟ ಮಗುವಿಗೆ ಪಾತ್ರೆಯಲ್ಲಿ ಲಸಿಕೆ ಹಾಕುವ ಫೋಟೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಕುಟುಂಬದಲ್ಲಿ ಒಂದು ಚಿಕ್ಕ ಮಗು ಇದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ. ಅದನ್ನು ಜೋಪನದಿಂದ ಕಾಪಾಡಿ ಬೆಳೆಸಲು ಕುಟುಂಬಸ್ಥರಿಗೆ ದೊಡ್ಡ ಸಮಸ್ಯೆಯುಂಟಾಗುತ್ತದೆ. ಇಂತಹ ಒಂದು ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನಂತರ ಜನರ ವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತಿದೆ. ಕೆಲವೇ ದಿನಗಳ ಹಿಂದೆ ಜನಿಸಿದ ಪುಟ್ಟ ಮಗು ಕೂಡ ಪ್ರವಾಹದಂತಹ ಭೀಕರ ಸಮಸ್ಯೆಯನ್ನು ಎದುರಿಸಬೇಕಾಯಿತು
.ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿಯೇ ಜನಿಸಿದ ಮಗುವಿನ ಆರೈಕೆ ಮಾಡಲು ಅದರ ಪೋಷಕರು ತುಂಬಾ ಕಷ್ಟಪಟ್ಟಿದ್ದಾರೆ. ಪುಟ್ಟ ಮಗುವಿನ ಪೋಷಕರು ಎಷ್ಟು ಜಾಗೃತರಾಗಿದ್ದರೆಂದರೆ ಸರಿಯಾದ ಸಮಯಕ್ಕೆ ಪೋಲಿಯೋ ಹನಿ ಹಾಕಿಸಲು ಮರೆಯಲಿಲ್ಲ. ಮಳೆ ನೀರಿನಿಂದ ರಕ್ಷಿಸಲು ಮಗುವನ್ನು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಇಟ್ಟಿರುವುದನ್ನು ಚಿತ್ರದಲ್ಲಿ ಕಾಣಬಹುದು. ಈ ಚಿತ್ರವು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ದೆಹಲಿ ಮೂಲದ ಏಮ್ಸ್ ವೈದ್ಯ ಯೋಗಿರಾಜ್ ರೈ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ. ‘ಗಂಗಾ ನದಿಯ ತಟದಲ್ಲಿ ಪುಟ್ಟ ಮಗುವಿಗೆ ಪಲ್ಸ್ ಪೋಲಿಯೋ ಲಸಿಕೆ’ ನೀಡಲಾಗಿದೆ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಆರೋಗ್ಯ ಕಾರ್ಯಕರ್ತರು ಜಲಾವೃತ ಪ್ರದೇಶಗಳಲ್ಲಿ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಮಗುವಿಗೆ ಪೋಲಿಯೋ ಲಸಿಕೆ ನೀಡಿದ ಆರೋಗ್ಯ ಕಾರ್ಯಕರ್ತರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ವ್ಯಕ್ತವಾಗಿದೆ.